ಕರ್ನಾಟಕ

karnataka

By

Published : Jan 20, 2022, 2:03 PM IST

ETV Bharat / bharat

ಅಚ್ಚರಿಯಾದರೂ ಇದು ಸತ್ಯ: ಮೃತಪಟ್ಟಿರುವುದಾಗಿ ವೈದ್ಯರಿಂದ ಘೋಷಿಸಿದ್ದ ಮಗು ಸ್ಮಶಾನದಲ್ಲಿ ಜೀವಂತ

ಒಡಿಶಾದ ಮಯೂರ್​ಭಂಜ್​ ಜಿಲ್ಲೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಘೋಷಿಸಲ್ಪಟ್ಟಿದ್ದ ಮಗುವೊಂದು ಸ್ಮಶಾನದಲ್ಲಿ ಅಚ್ಚರಿ ಎಂಬಂತೆ ಬದುಕುಳಿದ ಘಟನೆ ನಡೆದಿದೆ.

Keonjhar: Newborn baby declared dead by doctor, comes alive at graveyard
ಮೃತಪಟ್ಟಿರುವುದಾಗಿ ವೈದ್ಯರಿಂದ ಘೋಷಿಸಿದ್ದ ಮಗು ಸ್ಮಶಾನದಲ್ಲಿ ಜೀವಂತ

ಕಿಯೋಂಜರ್, ಒಡಿಶಾ:ವೈದ್ಯರಿಂದ ಮೃತಪಟ್ಟಿದೆ ಎಂದು ದೃಢೀಕರಿಸಲ್ಪಟ್ಟ ಮಗುವೊಂದು ಬದುಕಿರುವ ಅಪರೂಪದ ಘಟನೆ ಒಡಿಶಾದ ಮಯೂರ್​ಭಂಜ್​ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದ್ದು, ವೈದ್ಯರ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ ಖಾಡಿಕಪದ ಗ್ರಾಮದ ಸುನಿಯಾ ಮುಂಡ ಎಂಬಾತನ ಪತ್ನಿಯಾದ ರೈಮಣಿ ಮುಂಡ ಕಾರಂಜಿಯಾ ಆಸ್ಪತ್ರೆಯಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದರು. ಈ ಸಮಯದಲ್ಲಿ ಹೆರಿಗೆ ವೇಳೆ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದರು.

ವೈದ್ಯರಿಂದ ನಿರ್ಲಕ್ಷ್ಯ

ಮಗುವನ್ನು ಮನೆಗೆ ತಂದ ಸುನಿಯಾ ಮುಂಡ ನಂತರ ಹೂಳಲು ನೆರೆಹೊರೆಯವರೊಂದಿಗೆ ಸ್ಮಶಾನಕ್ಕೆ ಕೊಂಡೊಯ್ದಿದ್ದರು. ಹೂಳುವ ಸಲುವಾಗಿ ಕೆಲವು ಆಚರಣೆಗಳನ್ನು ನಡೆಸುತ್ತಿದ್ದ ವೇಳೆ ಮಗು, ಇದ್ದಕ್ಕಿದ್ದಂತೆ ಅಳಲು ಆರಂಭಿಸಿದೆ.

ಈಗ ಮತ್ತೆ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅದರ ಜೊತೆಗೆ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕಳ್ಳಭಟ್ಟಿ ದುರಂತದಲ್ಲಿ ಏಳು ಜನ ಸಾವು.. ಎಸ್​ಐಟಿ ರಚಿಸಿದ ರಾಜ್ಯ ಸರ್ಕಾರ!

ABOUT THE AUTHOR

...view details