ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡುವುದಕ್ಕೆ ಅನುಮತಿಗಾಗಿ ಆಪ್ ಸರ್ಕಾರ ಮತ್ತೊಮ್ಮೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಜೈಜಾಲ್ ಪ್ರಸ್ತಾಪ ಕಳುಹಿಸಿದೆ. ಈ ಹಿಂದೆ ಎರಡು ಬಾರಿ ಫೈಲ್‌ಗಳನ್ನು ಕಳುಹಿಸಿದ್ದರೂ ಎಲ್‌ಜಿ ಅನುಮತಿ ನೀಡಿರಲಿಲ್ಲ. ಕಳೆದ ವಾರವಷ್ಟೇ ದೆಹಲಿ ಹೈಕೋರ್ಟ್ ಈ ಯೋಜನೆಗೆ ಅನುಮತಿ ನೀಡಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ಪರ ಆದೇಶ ನೀಡಿತ್ತು.
ಯೋಜನೆ ಘೋಷಣೆ ಪ್ರಕಾರ ಮಾರ್ಚ್ 25 ರಿಂದಲೇ ದೆಹಲಿಯಲ್ಲಿ ಪ್ರತಿ ಮನೆ ಬಾಗಿಲಿಗೆ ಪಡಿತರ ನೀಡಬೇಕಿತ್ತು. ಆದರೆ, ಈ ಯೋಜನೆ ಸಂಬಂಧ ಕೇಂದ್ರ ಸರ್ಕಾರ ಹಲವು ತಕಾರಾರುಗಳನ್ನು ಎತ್ತಿತ್ತು. ಹೀಗಾಗಿ ಲೆಫ್ಟಿನೆಂಟ್ ಗವರ್ನರ್ ಸರ್ಕಾರದ ಪ್ರಸ್ತಾಪಕ್ಕೆ ಅನುಮತಿ ನೀಡಿರಲಿಲ್ಲ.
ದೆಹಲಿ ಸರ್ಕಾರ ಆರಂಭಿಸಿದ ಯೋಜನೆಗೆ 'ಮುಖ್ಯಮಂತ್ರಿ ಘರ್ ಘರ್ ರೇಷನ್ ಸ್ಕೀಮ್' ಎಂದು ಹೆಸರಿಸಲಾಗಿದೆ. ಯೋಜನೆಯಡಿ, ಪಡಿತರ ಕಾರ್ಡುದಾರರು ತಮ್ಮ ಮನೆಬಾಗಿಲಿಗೆ ಪಡಿತರವನ್ನು ಪಡೆಯುತ್ತಾರೆ. ಕೇಂದ್ರ ಸರ್ಕಾರವು ಯೋಜನೆಯನ್ನು ಆರಂಭಿಸದಂತೆ ದೆಹಲಿಯ ಆಹಾರ ಪೂರೈಕೆ ಕಾರ್ಯದರ್ಶಿಗೆ ಪತ್ರ ಬರೆದ ನಂತರ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು.
ಇದೇ ವಿಚಾರ ಸಂಬಂಧ ಆದೇಶ ನೀಡಿರುವ ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 30ರಂದು ನೀಡಿರುವ ತನ್ನ ಆದೇಶದಲ್ಲಿ, ಎಲ್ಲಾ ನ್ಯಾಯಬೆಲೆ ಅಂಗಡಿಗಳ ಡೀಲರ್‌ಗಳಿಗೆ ನೋಟಿಸ್ ನೀಡಿ ಯಾರೆಲ್ಲಾ ಪಡಿತರ ಚೀಟಿದಾರರು ತಮ್ಮ ಮನೆ ಬಾಗಿಲಿಗೆ ಪಡಿತರ ಪಡೆಯಲು ಆಯ್ಕೆ ಮಾಡಿಕೊಂಡಿದ್ದಾರೋ ಅವರ ವಿವರಗಳನ್ನು ಸಂಗ್ರಹಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.
ಇದನ್ನೂ ಓದಿ:Ration ಮನೆಗೆ ತಲುಪಿಸಲು ಕೇಂದ್ರದಿಂದ ನಿರಾಕರಣೆ: ಆಮ್ ಆದ್ಮಿ ಪಕ್ಷದ ಬೇಸರ