ನವದೆಹಲಿ:ಭಾರತದ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೆಂಬಲ ನೀಡಿದರು. ''ದೇಶವನ್ನು ಪ್ರೀತಿಸುವ ಪ್ರತಿಯೊಬ್ಬ ಭಾರತೀಯರು ಕುಸ್ತಿಪಟುಗಳಿಂದ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಮಹಿಳಾ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ಆರೋಪ:ಏಳು ಮಹಿಳಾ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಮೇಲೆ ಬಿಜೆಪಿ ಸಂಸದ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕುಸ್ತಿಪಟುಗಳು ಸುಮಾರು ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರು ಶುಕ್ರವಾರ ಡಬ್ಲ್ಯೂಎಫ್‌ಐ ಮುಖ್ಯಸ್ಥರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಲೈಂಗಿಕ ಕಿರುಕುಳ ನೀಡಿದ ತಪ್ಪು ಮಾಡುವರಿಗೆ ಗಲ್ಲಿಗೇರಿಸಬೇಕು- ಕೇಜ್ರಿವಾಲ್ ಟ್ವೀಟ್:ಕುಸ್ತಿಪಟುಗಳಿಗೆ ತಮ್ಮ ಬೆಂಬಲ ನೀಡಿದ ಕೇಜ್ರಿವಾಲ್ ಅವರು, ''ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ, ತಪ್ಪುಗಳನ್ನು ಮಾಡುವವರನ್ನು "ಗಲ್ಲಿಗೇರಿಸಬೇಕು" ಎಂದು ಹೇಳಿದರು. ದೇಶಕ್ಕೆ ಕೀರ್ತಿ ತಂದಿರುವ ಈ ಎಲ್ಲಾ ಮಹಿಳಾ ಆಟಗಾರರು ನಮ್ಮ ಹೆಣ್ಣುಮಕ್ಕಳು. ಅವರಿಗೆ ನ್ಯಾಯ ಸಿಗಬೇಕು. ಆರೋಪಿ ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅವನಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಅವರು ನಂತರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಪ್ರತಿಭಟನಾ ಸ್ಥಳದಿಂದ ತಮ್ಮ ಭಾಷಣದಲ್ಲಿ ಕೇಜ್ರಿವಾಲ್ ಅವರು, ''ದೇಶಾದ್ಯಂತದ ಜನರನ್ನು ರಜೆ ತೆಗೆದುಕೊಂಡು ಜಂತರ್ ಮಂತರ್‌ಗೆ ಬಂದು ಕುಸ್ತಿಪಟುಗಳನ್ನು ಬೆಂಬಲಿಸುವಂತೆ ಕೇಳಿಕೊಂಡರು. ಪ್ರತಿಭಟನಾ ಸ್ಥಳಕ್ಕೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ. ಆಹಾರ ಮತ್ತು ಹಾಸಿಗೆಗಳಂತಹ ಸರಬರಾಜುಗಳನ್ನು ಅನುಮತಿಸಲಾಗಿಲ್ಲ ಎಂದು ಪ್ರತಿಭಟನಾಕಾರರು ಮುಖ್ಯಮಂತ್ರಿಗಳಿಗೆ ಹೇಳಿಕೊಂಡರು. ಸಿಎಂ ಪ್ರತಿಕ್ರಿಯಿಸಿ, ಸಹಾಯ ಮಾಡುವ ಭರವಸೆ ನೀಡಿದರು.