ಸೂರತ್, ಗುಜರಾತ್:ಸ್ಥಳೀಯ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಗಮನಾರ್ಹ ಸಾಧನೆ ಮಾಡಿದ ಹಿನ್ನೆಲೆ ಗುಜರಾತ್ನ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರ್ಯಾಲಿ ಹಮ್ಮಿಕೊಂಡಿದ್ದಾರೆ.
ರೋಡ್ ಶೋ ಸೂರತ್ ನಗರದಲ್ಲಿ ನಡೆಯುಲಿದ್ದು, ರಾಜ್ಯದ 6 ಕಾರ್ಪೊರೇಷನ್ಗಳಲ್ಲಿರುವ 470 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 27 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದಿರುವುದಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ಧನ್ಯವಾದ ಅರ್ಪಿಸಲಿದ್ದಾರೆ.
ಇದನ್ನೂ ಓದಿ:ಚೆನ್ನೈ ಎಕ್ಸ್ಪ್ರೆಸ್ನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ..
ಗುಜರಾತ್ನ ಬಿಜೆಪಿ ಪಕ್ಷವನ್ನೂ ಆಮ್ ಆದ್ಮಿ ಪಕ್ಷ ಗುರಿಯಾಗಿಸಿಕೊಂಡಿದ್ದು, ಸ್ಥಳೀಯ ರೈತರ ಸಮಸ್ಯೆಗಳತ್ತ ಗಮನಹರಿಸಿ, ಅವರಲ್ಲಿ ಬಿಜೆಪಿಯ ದುರಾಡಳಿತದ ಬಗ್ಗೆ ಜಾಗೃತಿ ಮೂಡಿಸಲಿದೆ.
ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ವಿಚಾರವನ್ನು ಆಮ್ ಆದ್ಮಿ ಪಕ್ಷ ಮುನ್ನೆಲೆಗೆ ತರಲಿದೆ. ರೈತರಿಗೆ ಮತ್ತು ಬಡವರಿಗೆ ಯೋಜನೆಗಳನ್ನು ರೂಪಿಸಲು ಆಗ್ರಹಿಸಲಿದೆ. ಇದರ ಜೊತೆಗೆ ಗ್ರಾಮಾಂತರ ಪ್ರದೇಶಕ್ಕೂ ಪಕ್ಷವನ್ನು ಕೊಂಡೊಯ್ಯುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.