ಕರ್ನಾಟಕ

karnataka

ETV Bharat / bharat

ಕೇದಾರನಾಥ ಯಾತ್ರೆ ನೋಂದಣಿ ಜೂನ್ 10 ರವರೆಗೆ ಸ್ಥಗಿತ

ಕೇದಾರನಾಥ ಯಾತ್ರೆಯ ನೋಂದಣಿಯನ್ನು ಉತ್ತರಾಖಂಡ್ ಸರ್ಕಾರ ಮತ್ತೊಮ್ಮೆ ಸ್ಥಗಿತಗೊಳಿಸಿದೆ.

ಕೇದಾರನಾಥ
ಕೇದಾರನಾಥ

By

Published : Jun 5, 2023, 5:55 PM IST

ಡೆಹ್ರಾಡೂನ್ (ಉತ್ತರಾಖಂಡ್​): ಕೇದಾರನಾಥ ಯಾತ್ರೆ ಕೈಗೊಂಡಿರುವ ಭಕ್ತರಿಗೆ ಕ್ಷಣಕ್ಷಣಕ್ಕೂ ಅಲ್ಲಿನ ವಾತಾವರಣದಲ್ಲಿ ಬದಲಾವಣೆ ಆಗುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಧಿಕ ಜನಸಂದಣಿಯ ನಡುವೆ ಮಳೆ, ಭಾರಿ ಹಿಮಪಾತ ಸಂಭವಿಸುತ್ತಲೇ ಇದೆ. ಹೀಗಾಗಿ ಪವಿತ್ರ ಯಾತ್ರೆಗೆ ಅಡ್ಡಿಯಾಗುತ್ತಿದ್ದು, ಈ ಹಿಂದೆ ಮೇ 25 ರವರೆಗೆ ಹೊಸ ನೋಂದಣಿಯನ್ನು ರದ್ದುಪಡಿಸಲಾಗಿತ್ತು. ಇದೀಗ ಮತ್ತೆ ಜೂನ್​ 10 ರವರೆಗೆ ಆಫ್‌ಲೈನ್ ಮತ್ತು ಆನ್‌ಲೈನ್ ನೋಂದಣಿಯನ್ನು ಸರ್ಕಾರ ಸ್ಥಗಿತಗೊಳಿಸಿದೆ.

ಆದರೆ, ಈಗಾಗಲೇ ನೋಂದಣಿ ಮಾಡಿಸಿಕೊಂಡವರು ಕೇದಾರನಾಥ ಯಾತ್ರೆ ಕೈಗೊಳ್ಳಬಹುದು ಎಂದು ಸರ್ಕಾರ ಸೂಚನೆ ನೀಡಿದೆ. ಸರ್ಕಾರದ ಅಂಕಿಅಂಶಗಳನ್ನು ನೋಡಿದರೆ, ಇಲ್ಲಿಯವರೆಗೆ 7 ಲಕ್ಷದ 13 ಸಾವಿರ ಭಕ್ತರು ದೇವರ ದರ್ಶನ ಪಡೆದಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೇದಾರನಾಥ ಸನ್ನಿಧಿಯಲ್ಲಿ ದಿನದಿನಕ್ಕೆ ಹೆಚ್ಚುತ್ತಿರುವ ಭಕ್ತರನ್ನು ನಿಭಾಯಿಸುವುದು ಕೂಡಾ ಆಡಳಿತಕ್ಕೆ ಸವಾಲಾಗುತ್ತಿದೆ. ಈ ಎಲ್ಲ ಕಾರಣಕ್ಕೆ ಭಕ್ತರ ಸಂಖ್ಯೆಯನ್ನು ಮಿತಿಗೊಳಿಸಲು ರಾಜ್ಯ ಸರ್ಕಾರ ಜೂನ್​ ಹತ್ತರ ವರೆಗೆ ನೋಂದಣಿ ನಿಲ್ಲಿಸಿದೆ.

ಸೂಚನೆ

ಇದನ್ನೂ ಓದಿ :ಕೇದಾರನಾಥ ಧಾಮ: ಮೇ 25 ರವರೆಗೆ ಹೊಸ ಯಾತ್ರಾರ್ಥಿಗಳ ನೋಂದಣಿ ನಿಷೇಧ

ಈ ಬಾರಿ ಕೇದರಾನಾಥ ಯಾತ್ರೆಯು ಭಕ್ತರ ಸಂಖ್ಯೆಯಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಲಿದೆ ಎಂದು ಉತ್ತರಾಖಂಡ್ ಸರ್ಕಾರ ಅಂದಾಜು ಮಾಡಿತ್ತು. ಈ ಅಂದಾಜಿನಂತೆಯೇ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಭಕ್ತರು ಯಾತ್ರೆ ಕೈಗೊಂಡಿದ್ದಾರೆ. ಅಲ್ಲದೇ ಬರೋಬ್ಬರಿ 40 ಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ.

ಸುಮೇರು ಪರ್ವತದ ಹಿಮದಲ್ಲಿ ಸಿಲುಕಿದ್ದ ಭಕ್ತನ ರಕ್ಷಣೆ: ಕೇದಾರನಾಥ ಧಾಮಕ್ಕೆ ಯಾತ್ರೆ ಕೈಗೊಂಡು ದೇವರ ದರ್ಶನ ಪಡೆಯಲು ಬಂದಿದ್ದ ಉತ್ತರ ಪ್ರದೇಶದ ಭಕ್ತರೊಬ್ಬರು ಸುಮೇರು ಪರ್ವತದ ಹಿಮದಲ್ಲಿ ಮೇ 26 ರಂದು (ಶುಕ್ರವಾರ) ಸಿಲುಕಿ ಸಂಕಷ್ಟದಲ್ಲಿದ್ದರು. ತಕ್ಷಣವೇ ಎಸ್​ಡಿಆರ್​ಎಫ್​ ಮತ್ತು ಎನ್​ಡಿಆರ್‌ಎಫ್​ ತಂಡಗಳು ಕಾರ್ಯಾಚರಣೆ ನಡೆಸಿ ವ್ಯಕ್ತಿಯ ಪ್ರಾಣ ಕಾಪಾಡಿದ್ದರು.

ಘಟನೆಯ ವಿವರ: ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ವೃಂದಾವನ ನಿವಾಸಿ ಸಚಿನ್ ಗುಪ್ತಾ (38) ಅವರು ಮೊದಲು ಕೇದಾರನಾಥ ದೇವಸ್ಥಾನದಿಂದ ಭೈರವನಾಥ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿಂದ ರೋಮಾಂಚನಕಾರಿ ಅನುಭವ ಪಡೆಯಲು ಪರ್ವತ ಏರುತ್ತಾ ಹೋಗಿದ್ದಾರೆ. ಸುಮೇರು ಪರ್ವತ ತಲುಪಿದಾಗ ಅಲ್ಲಿ ಹಿಮ ರಾಶಿಯೇ ಎದುರಾಗಿದೆ. ಸಚಿನ್ ಗುಪ್ತಾ ಅವರು ಅಲ್ಲಿಯೇ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲಿ ಮುಂದೆ ಹೋಗಲು ಸಾಧ್ಯವಾಗದೆ ಹಿಂತಿರುಗಲೂ ಆಗದೇ ಸುಸ್ತಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಫೋನ್ ಕರೆ ಮಾಡಿದ್ದರು. ಬಳಿಕ ಎಸ್​ಡಿಆರ್​ಎಫ್​ ಮತ್ತು ಎನ್​ಡಿಆರ್‌ಎಫ್ ತಂಡಗಳು ಸುಮೇರು ಪರ್ವತದ ತುದಿಯಿಂದ ಸಾಕಷ್ಟು ಪ್ರಯತ್ನ ನಡೆಸಿ ಯುಪಿ ಮೂಲದ ಭಕ್ತನನ್ನು ರಕ್ಷಿಸಿದ್ದರು. ಕೇದಾರನಾಥ ಧಾಮದಲ್ಲಿರುವ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ :ಹಿಮಪಾತದ ನಡುವೆಯೇ ತೆರೆದ ಕೇದಾರನಾಥನ ಮಹಾದ್ವಾರ: ಉತ್ತರಾಖಂಡ ಸಿಎಂ ಭಾಗಿ

ABOUT THE AUTHOR

...view details