ಕರ್ನಾಟಕ

karnataka

ETV Bharat / bharat

ನಾಳೆ ತೆರೆಯಲಿದೆ ಐತಿಹಾಸಿಕ ಕೇದಾರನಾಥ ದೇವಸ್ಥಾನ... 11 ಕ್ವಿಂಟಲ್​ ಹೂವಿನಿಂದ ಅಲಂಕಾರ - ಕೇದಾರನಾಥ ದೇವಸ್ಥಾನ ಓಪನ್​

ಉತ್ತರಾಖಂಡ್​ನಲ್ಲೂ ಕೋವಿಡ್​ ಸೋಂಕಿತ ಪ್ರಕರಣ ಹೆಚ್ಚಾಗಿರುವ ಕಾರಣ ಕೇವಲ ಪೂಜೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಭಕ್ತಾದಿಗಳು ಇಲ್ಲಿಗೆ ಹೋಗದಂತೆ ನಿರ್ಬಂಧ ಹೇರಲಾಗಿದೆ.

Kedarnath Dham
Kedarnath Dham

By

Published : May 16, 2021, 6:28 PM IST

ರುದ್ರಪ್ರಯಾಗ್ (ಉತ್ತರಾಖಂಡ): ಐತಿಹಾಸಿಕ ಪುಣ್ಯಕ್ಷೇತ್ರ ಎಂದು ಪ್ರಸಿದ್ಧಿ ಪಡೆದುಕೊಂಡಿರುವ ಕೇದಾರನಾಥ ದೇವಸ್ಥಾನ ನಾಳೆ ಬೆಳಗ್ಗೆ ಓಪನ್​​ ಆಗಲಿದ್ದು, ದಾಖಲೆಯ 11 ಕ್ವಿಂಟಲ್​​​​ ಹೂವಿನಿಂದ ಅಲಂಕಾರ ಮಾಡಲಾಗಿದೆ.

ನಾಳೆ ಓಪನ್​ ಆಗಲಿದೆ ಕೇದಾರನಾಥ್​ ದೇಗುಲ

ಈಗಾಗಲೇ ಮಂದಿರದ ಜಗದ್ಗುರುಗಳಾದ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್​​ ಮನುಜ್​ ಗೋಯಲ್​ ಕೇದಾರನಾಥ್​ ಧಾಮ್​ ತಲುಪಿದ್ದಾರೆ. ಈಗಾಗಲೇ ಎಲ್ಲ ಸಿದ್ಧತೆ ಪೂರ್ಣಗೊಂಡಿರುವ ಕಾರಣ ನಾಳೆ ಬೆಳಗ್ಗೆ 5 ಗಂಟೆಗೆ ದೇವಸ್ಥಾನದ ಬಾಗಿಲು ಓಪನ್​​ ಆಗಲಿದೆ.

ಕೊರೊನಾ ಮಹಾಮಾರಿ ಕಾರಣ ಕೆಲವೇ ಪುರೋಹಿತರಿಗೆ ಕೇದಾರನಾಥ ಧಾಮಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ದೇವಸ್ಥಾನ ಮಂಡಳಿಯ ಅಧಿಕಾರಿ ಯದುವೀರ್​​ ಪುಷ್ವಾನ್​, ಕೇದಾರನಾಥ್​​ ಸೇರಿದಂತೆ ಎಲ್ಲ ದೇವಾಲಯಗಳನ್ನು ಬಣ್ಣಗಳಿಂದ ಅಲಂಕಾರ ಮಾಡಲಾಗಿದ್ದು, ವಿದ್ಯುತ್​ ಹಾಗೂ ನೀರಿನ ಸರಬರಾಜು ಈಗಾಗಲೇ ವ್ಯವಸ್ಥೆಯಾಗಿದೆ ಎಂದರು.

ಇದನ್ನೂ ಓದಿ: ಕೋವಿಡ್ ಸೋಂಕಿದ್ದರೂ ಮನೆಗೆ ಬಂದ ಅಣ್ಣನ ಕೊಂದ ತಮ್ಮ!

ಪ್ರತಿ ವರ್ಷ ಅಕ್ಟೋಬರ್​​-ನವೆಂಬರ್​ ಅವಧಿಯಲ್ಲಿ ಕೇದಾರನಾಥ್ ಸೇರಿದಂತೆ ಚಾರ್​ಧಾಮ್​ನ ಎಲ್ಲ ಬಾಗಿಲು ಮುಚ್ಚಲಾಗುತ್ತದೆ. ಇದಾದ ಬಳಿಕ ಏಪ್ರಿಲ್​​-ಮೇ ತಿಂಗಳಲ್ಲಿ ಭಕ್ತರ ದರ್ಶನಕ್ಕಾಗಿ ತೆರೆಯಲಾಗುತ್ತದೆ. ಇನ್ನು ಬದ್ರಿನಾಥ್​​ ಮೇ 18ರಂದು ಓಪನ್​​ ಆಗಲಿದೆ. ಕೊರೊನಾ ಮಹಾಮಾರಿ ಹಾವಳಿ ಹೆಚ್ಚಾಗಿರುವ ಕಾರಣ ಭಕ್ತಾಧಿಗಳಿಗೆ ಇಲ್ಲಿನ ಪ್ರವೇಶ ನಿರಾಕರಣೆ ಮಾಡಲಾಗಿದೆ.

ABOUT THE AUTHOR

...view details