ಕರ್ನಾಟಕ

karnataka

ETV Bharat / bharat

ಮುನುಗೋಡು ಉಪ ಚುನಾವಣೆ: ಬಿಜೆಪಿ ವಿರುದ್ಧ ಗೆದ್ದು ಬೀಗಿದ ಟಿಆರ್​ಎಸ್ - KCRs Party Wins Key Telangana

ತೆಲಂಗಾಣದ ಮುನುಗೋಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್‌ಎಸ್ ಅಭ್ಯರ್ಥಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

trs
trs

By

Published : Nov 6, 2022, 6:59 PM IST

ಹೈದರಾಬಾದ್:ದೇಶದ ಗಮನ ಸೆಳೆದಿದ್ದತೆಲಂಗಾಣದ ಮುನುಗೋಡು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಭ್ಯರ್ಥಿ ಕೆ ಪ್ರಭಾಕರ್ ರೆಡ್ಡಿ ಅವರು ಬಿಜೆಪಿಯ ಕೆ ರಾಜಗೋಪಾಲ್ ರೆಡ್ಡಿ ವಿರುದ್ಧ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕೆ ರಾಜಗೋಪಾಲ್ ರೆಡ್ಡಿ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ಬಳಿಕ ಪಕ್ಷ ತೊರೆದು ಬಿಜೆಪಿ ಸೇರಿದ್ದು, ಉಪಚುನಾವಣೆ ನಡೆದಿತ್ತು. ಮುನುಗೋಡು ಉಪಚುನಾವಣೆಯ ಪ್ರಚಾರಕ್ಕಾಗಿ ಟಿಆರ್​​​ಎಸ್ ಮತ್ತು ಬಿಜೆಪಿ ಜಿದ್ದಿಗೆ ಬಿದ್ದು ಪ್ರಚಾರ ನಡೆಸಿದ್ದವು.

ಇದನ್ನೂ ಓದಿ:ಮುನುಗೋಡು ಚುನಾವಣೆ ಫಲಿತಾಂಶ ದೇಶಕ್ಕೆ ಸಂದೇಶ.. ಕೇಂದ್ರದ ವಿರುದ್ಧ ಕೆಸಿಆರ್​​​ ವಾಗ್ದಾಳಿ

ಇಂದು ಸಂಜೆ ಫಲಿತಾಂಶ ಹೊರಬರುತ್ತಿದ್ದಂತೆ ಟಿಆರ್‌ಎಸ್ ಕಾರ್ಯಕರ್ತರು ಹೈದರಾಬಾದ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯೆದುರು ಸಂಭ್ರಮಾಚರಣೆ ಮಾಡಿದರು. ನವೆಂಬರ್ 3 ರಂದು ನಡೆದ ಈ ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ಶೇ. 93 ರಷ್ಟು ಮತದಾನವಾಗಿತ್ತು.

ABOUT THE AUTHOR

...view details