ಹೈದರಾಬಾದ್:ಇಂದು ತೆಲಂಗಾಣಕ್ಕೆ ಆಗಮಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲು ಮುಖ್ಯಮಂತ್ರಿ ಕೆ. ಚಂದ್ರೇಶೇಖರ ರಾವ್ ಅವರು ತೆರಳುತ್ತಿಲ್ಲ ಎಂದು ಗೊತ್ತಾಗಿದೆ. ನಗರದಲ್ಲಿ ಇಂದಿನಿಂದ ಆರಂಭವಾಗಲಿರುವ ಭಾರತೀಯ ಜನತಾ ಪಕ್ಷದ ಎರಡು ದಿನಗಳ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಹೈದರಾಬಾದ್ಗೆ ಆಗಮಿಸುತ್ತಿದ್ದಾರೆ.
ಪ್ರಧಾನಿ ಮೋದಿ ಅವರಿಗೂ ಕೆಲ ಗಂಟೆಗಳ ಮುನ್ನ ಹೈದರಾಬಾದಿನ ಬೇಗಂ ಪೇಟ್ ವಿಮಾನ ನಿಲ್ದಾಣಕ್ಕೆ ಬರಲಿರುವ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬರಮಾಡಿಕೊಳ್ಳಲು ಸಿಎಂ ಕೆಸಿಆರ್ ಹೋಗಲಿದ್ದಾರೆ.
ರಾಷ್ಟ್ರಪತಿ ಚುನಾವಣೆಗಾಗಿ ಯಶವಂತ್ ಸಿನ್ಹಾ ಅವರನ್ನು ಕೆಸಿಆರ್ ಬೆಂಬಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಮಯದಲ್ಲಿ ವಿಮಾನ ನಿಲ್ದಾಣದಲ್ಲಿ ಟಿಆರ್ಎಸ್ ಪಕ್ಷದ ಕೇವಲ ಓರ್ವ ಸಚಿವರು ಮಾತ್ರ ಇರಲಿದ್ದು, ಉಳಿದೆಲ್ಲ ಪ್ರಮುಖ ಸಚಿವರು ಸಿಎಂ ಕೆಸಿಆರ್ ಅವರೊಂದಿಗೆ ಯಶವಂತ್ ಸಿನ್ಹಾ ಸ್ವಾಗತಕ್ಕೆ ಹಾಜರಿ ಹಾಕಲಿದ್ದಾರೆ.