ಹೈದರಾಬಾದ್:ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ರಾವ್ ಅವರು ತಮ್ಮ ಪಕ್ಷ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯನ್ನು ವಿಸ್ತರಿಸುವ ಭಾಗವಾಗಿ ಇಂದು 600 ವಾಹನಗಳ ಬೃಹತ್ ಬೆಂಗಾವಲು ಪಡೆಯೊಂದಿಗೆ ಮಹಾರಾಷ್ಟ್ರಕ್ಕೆ ತೆರಳಿದರು. ರಸ್ತೆ ಮಾರ್ಗವಾಗಿ ತೆರಳಿದ ಅವರ ಬೆಂಗಾವಲು ಪಡೆ 6 ಕಿ.ಮೀ.ಗೂ ಅಧಿಕವಾಗಿತ್ತು. ಸಚಿವರು, ಸಂಸದರು, ಶಾಸಕರು, ಎಂಎಲ್ಸಿಗಳು ಸೇರಿದಂತೆ ಪಕ್ಷದ ಮುಖಂಡರ ಜತೆಗೂಡಿ ಅವರು ಸೊಲ್ಲಾಪುರಕ್ಕೆ ಭೇಟಿ ನೀಡುತ್ತಿದ್ದಾರೆ.
ಬಿಆರ್‌ಎಸ್ ಮುಖ್ಯಸ್ಥರು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಟಿಎಸ್‌ಆರ್‌ಟಿಸಿ) ವಿಶೇಷ ಬಸ್‌ನಲ್ಲಿ ಕೆಲವು ಹಿರಿಯ ಬಿಆರ್‌ಎಸ್ ನಾಯಕರೊಂದಿಗೆ ಮುಂಭಾಗದಲ್ಲಿ ಕುಳಿತಿದ್ದರು. ತಮ್ಮ ಅಧಿಕೃತ ನಿವಾಸವಾದ ಪ್ರಗತಿ ಭವನದಿಂದ ಪ್ರಯಾಣ ಆರಂಭವಾಗುತ್ತಿದ್ದಂತೆಯೇ ಮುಂದಿನ ಸೀಟಿನಲ್ಲಿ ಕುಳಿತಿದ್ದ ಸಿಎಂ ಕೆಸಿಆರ್ ಜನರತ್ತ ಕೈ ಬೀಸಿದರು.
ಮಾರ್ಗಮಧ್ಯೆ ಜಮಾಯಿಸಿದ್ದ ಹೆಚ್ಚಿನ ಸಂಖ್ಯೆಯ ಬಿಆರ್‌ಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಕೆಸಿಆರ್ ಅವರಿದ್ದ ಬಸ್‌ಗೆ ಪುಷ್ಪವೃಷ್ಟಿ ಸುರಿಸಿದರು. ಎರಡು ದಿನಗಳ ಭೇಟಿಯಲ್ಲಿ ಕೆಸಿಆರ್ ಅವರು ಸೊಲ್ಲಾಪುರದಲ್ಲಿ ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಆರ್‌ಎಸ್ ಸೇರಲು ಉತ್ಸುಕರಾಗಿರುವ ವಿವಿಧ ಪಕ್ಷಗಳ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಪಂಡರಾಪುರ ಷತ್ತು ತುಳಜಾಪುರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಂಜೆ ಸೊಲ್ಲಾಪುರ ತಲುಪಿದ ನಂತರ ಅಲ್ಲೇ ರಾತ್ರಿ ಉಳಿದುಕೊಳ್ಳಲಿದ್ದಾರೆ. ಮರುದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂ ಸಮ್ಮುಖದಲ್ಲಿ ಸ್ಥಳೀಯ ನಾಯಕ ಭಗೀರಥ ಭಾಲ್ಕೆ ಅವರು ಔಪಚಾರಿಕವಾಗಿ ಬಿಆರ್‌ಎಸ್ ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷ ಸೇರ್ಪಡೆ ಕಾರ್ಯಕ್ರಮ:ಪ್ರವಾಸದ ವೇಳೆ ಪಕ್ಷದ ಬಲವರ್ಧನೆಗಾಗಿ ಹಲವು ಮುಖಂಡರು ಮತ್ತು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿದ್ದಾರೆ. ಪಕ್ಷ ಸೇರ್ಪಡೆ ಬಳಿಕ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ತೆಲಂಗಾಣದಿಂದ ಸೊಲ್ಲಾಪುರಕ್ಕೆ ವಲಸೆ ಬಂದ ಕಾರ್ಮಿಕರನ್ನೂ ಇದೇ ವೇಳೆ ಭೇಟಿ ಮಾಡಲಿದ್ದಾರೆ.