ಕಾಜಿರಂಗ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಚಂದನ್ ನಾಥ್ ಎಂಬುವವರಿಗೆ ದೆಹಲಿಗೆ ಬರುವಂತೆ ಆಹ್ವಾನ ನೀಡಲಾಗಿದೆ. ಇವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಕಾಜಿರಂಗ ಬಾಮೂ ಬಾಟಲ್(Kaziranga Bamoo Bottle)ಗಳನ್ನು ಸಂಶೋಧಿಸಿದ್ದಾರೆ. ಪ್ಲಾಸ್ಟಿಕ್ ಬಾಟಲ್ ಬಳಸುವುದನ್ನು ಕಡಿಮೆ ಮಾಡುವ ಸಲುವಾಗಿ, ಇದನ್ನು ಕಂಡುಹಿಡಿದಿದ್ದಾರೆ.
ಮಾಲಿನ್ಯದಿಂದ ಪರಿಸರ ಸಂರಕ್ಷಣೆ ಮಾಡಲು ವಿವಿಧ ಕ್ಷೇತ್ರಗಳಲ್ಲಿ ಆವಿಷ್ಕಾರಗಳನ್ನು ಮಾಡಿರುವ 100 ಜನರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಾಧಿಕಾರವು ಆಹ್ವಾನ ನೀಡಿದೆ. ಅವರಲ್ಲಿ ಚಂದನ್ ಕೂಡ ಒಬ್ಬರು. ಸೆಪ್ಟಂಬರ್ 11, 2022 ರಂದು ದೆಹಲಿಯಲ್ಲಿ ಈವೆಂಟ್ ನಡೆಯಲಿದೆ. ಚಂದನ್ ಅವರ ಹೆಸರನ್ನು 2021 ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಪ್ರಸಕ್ತ ವರ್ಷ (2022) ಏಷ್ಯಾ ಬುಕ್ ಆಫ್ ರೆಕಾರ್ಡ್ ಪಟ್ಟಿಯಲ್ಲಿ ಸೇರಿಸಲಾಗಿದೆ.