ಕರ್ನಾಟಕ

karnataka

ETV Bharat / bharat

ಬ್ರಿಟಿಷ್ ಮ್ಯೂಸಿಯಂನಲ್ಲಿ ಬಂಗಾಳದ ಕೌಶಿಕ್ ಘೋಷ್​ ನಿರ್ಮಿತ ಕಾಳಿ ದೇವಿ ವಿಗ್ರಹ !

ಕುಮಾರತುಲಿಯಲ್ಲಿ ಮೂರ್ತಿಗಳನ್ನು ತಯಾರಿಸಿ ದೇಶದ ಮತ್ತು ಹೊರಗಿನ ವಿವಿಧ ಸ್ಥಳಗಳಿಗೆ ಕಳುಹಿಸಲಾಗುತ್ತದೆ. ಈಗ ಫೈಬರ್‌ನಿಂದ ಮಾಡಿದ ವಿಗ್ರಹ ಮುನ್ನೆಲೆಗೆ ಬಂದಿದ್ದು, ಕುಶಲಕರ್ಮಿ ಕೌಶಿಕ್ ಘೋಷ್ ಅವರು ಇದನ್ನು ನಿರ್ಮಾಣ ಮಾಡಿದ್ದಾರೆ. ಇದನ್ನು ಬ್ರಿಟಿಷ್​​ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.

By

Published : May 30, 2022, 9:06 PM IST

Updated : May 30, 2022, 9:58 PM IST

ಕೌಶಿಕ್ ಘೋಷ್​ ಅವರ ಕಾಳಿ ದೇವಿಯ ವಿಗ್ರಹ ಬ್ರಿಟಿಷ್ ಮ್ಯೂಸಿ ಕೌಶಿಕ್ ಘೋಷ್​ ಅವರ ಕಾಳಿ ದೇವಿಯ ವಿಗ್ರಹ ಬ್ರಿಟಿಷ್ ಮ್ಯೂಸಿಯಂನಲ್ಲಿಯಂನಲ್ಲಿ
ಕೌಶಿಕ್ ಘೋಷ್​ ಅವರ ಕಾಳಿ ದೇವಿಯ ವಿಗ್ರಹ ಬ್ರಿಟಿಷ್ ಮ್ಯೂಸಿಯಂನಲ್ಲಿ

ಕೋಲ್ಕತ್ತಾ: ಕುಮಾರತುಲಿಯು ಕೋಲ್ಕತ್ತಾದ ಜನರಿಗೆ ಮಾತ್ರವಲ್ಲದೇ ದೇಶ ಮತ್ತು ವಿದೇಶದಲ್ಲಿರುವ ಬಂಗಾಳಿಗಳಿಗೂ ಪೂಜೆಯ ವಿಷಯಕ್ಕೆ ಬಂದರೆ ನೆಚ್ಚಿನ ತಾಣ. ದುರ್ಗಾ ಮತ್ತು ಕಾಳಿಯಿಂದ ಹಿಡಿದು ಜಗಧಾತ್ರಿಯವರೆಗಿನ ಎಲ್ಲ ಪೂಜೆಗಳಲ್ಲಿನ ವಿಗ್ರಹಗಳು ಇಲ್ಲಿ ಸಿಗುತ್ತವೆ.

ಕುಮಾರತುಲಿಯಲ್ಲಿ ಮೂರ್ತಿಗಳನ್ನು ತಯಾರಿಸಿ ದೇಶದ ಮತ್ತು ಹೊರಗಿನ ವಿವಿಧ ಸ್ಥಳಗಳಿಗೆ ಕಳುಹಿಸಲಾಗುತ್ತದೆ. ಈಗ ಫೈಬರ್‌ನಿಂದ ಮಾಡಿದ ವಿಗ್ರಹ ಮುನ್ನೆಲೆಗೆ ಬಂದಿದ್ದು, ಕುಶಲಕರ್ಮಿ ಕೌಶಿಕ್ ಘೋಷ್ ಅವರು ಇದನ್ನು ನಿರ್ಮಾಣ ಮಾಡಿದ್ದಾರೆ. ಇದನ್ನು ಬ್ರಿಟಿಷ್​​ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.

ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಹಲವಾರು ಇತರ ವಸ್ತುಗಳ ಜೊತೆಗೆ, ಕಾಳಿ ದೇವಿಯ ಈ ವಿಗ್ರಹವು ಹೆಚ್ಚು ಆಕರ್ಷಣೀಯವಾಗಿ ವೀಕ್ಷಕರ ಗಮನ ಸೆಳೆಯಲಿದೆ. ಇನ್ನು ರಾಜ್ಯ, ದೇಶದ ಗಡಿ ಮೀರಿ ಘೋಷ್​ ಅವರು ಪ್ರಸಿದ್ಧಿ ಪಡೆದಿದ್ದಾರೆ. ವಿದೇಶಗಳಲ್ಲೂ ಇವರ ಕೀರ್ತಿ ಪಸರಿಸಿದೆ. ಅವರ ಕೈಯಿಂದ ಮಾಡಿದ ಈ ಪ್ರತಿಮೆಯನ್ನು ಮೇ 17 ರಂದು ಬ್ರಿಟಿಷ್ ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಾಗಿದೆ.

ಬ್ರಿಟಿಷ್ ಮ್ಯೂಸಿಯಂನಲ್ಲಿ ಬಂಗಾಳದ ಕೌಶಿಕ್ ಘೋಷ್​ ನಿರ್ಮಿತ ಕಾಳಿ ದೇವಿ ವಿಗ್ರಹ !

ಘೋಷ್ ಸೆಂಟ್ರಲ್ ಲಂಡನ್‌ನಲ್ಲಿರುವ ಕ್ಯಾಮ್ಡೆನ್ ಪೂಜೋ ಕಮಿಟಿಯ ದುರ್ಗಾ ವಿಗ್ರಹವನ್ನು ತಯಾರು ಮಾಡಿದ್ದರು. ಇದನ್ನು ನೋಡಿದ ಅಲ್ಲಿನ ಅಧಿಕಾರಿಯೊಬ್ಬರು ಘೋಷ್ ಅವರನ್ನು ಬ್ರಿಟಿಷ್ ಮ್ಯೂಸಿಯಂ ಅಧಿಕಾರಿಗಳಿಗೆ ಪರಿಚಯಿಸಿದ್ದಾರೆ. ನಂತರ ಇವರಿಗೆ ಕಲಾಕೃತಿ ಮಾಡಲು ತಿಳಿಸಿದ್ದರಂತೆ.

ಬ್ರಿಟಿಷ್ ಮ್ಯೂಸಿಯಂನಲ್ಲಿ ನನ್ನ ಕಲಾಕೃತಿಯು ಸ್ಥಾನ ಪಡೆದಿದೆ ಎಂದು ನನಗೆ ತುಂಬಾ ಹೆಮ್ಮೆ ಇದೆ ಎಂದು ಘೋಷ್ ಸಂತಸಪಟ್ಟಿದ್ದಾರೆ. ಇನ್ನು ಐದೂವರೆ ಅಡಿಯ ಈ ವಿಗ್ರಹವನ್ನು ಸಿದ್ಧಪಡಿಸಲು ಒಂದೂವರೆ ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ಈ ಸಂಬಂಧ ಅಲ್ಲಿನ ಅಧಿಕಾರಿಗಳು ಹಲವಾರು ಬಾರಿ ವಿಡಿಯೋ ಕರೆ ಮಾಡುವ ಮೂಲಕ ಮಾರ್ಗರ್ಶನ ನೀಡುತ್ತಿದ್ದರಂತೆ.

ಇದನ್ನೂ ಓದಿ: ಡ್ರೋನ್​ ಮೂಲಕ ಅಂಚೆ ಸೇವೆ.. ಗುಜರಾತ್​ನಲ್ಲಿ ಯಶಸ್ವಿಯಾದ ಪ್ರಯೋಗ

Last Updated : May 30, 2022, 9:58 PM IST

For All Latest Updates

TAGGED:

ABOUT THE AUTHOR

...view details