ಅಮೃತಸರ (ಪಂಜಾಬ್): ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ಈಗಾಗಲೇ ಎಲ್ಲರಿಗೂ ತಿಳಿದಿರುವ ಕಾರ್ಯಕ್ರಮ. ಇದರಲ್ಲಿ 15 ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟರೆ 7 ಕೋಟಿ ಗೆಲ್ಲುವ ಅವಕಾಶ ಇದೆ. ಆದರೆ ಇಲ್ಲಿಯ ವರೆಗೆ ತಲುಪಲು 14 ಪ್ರಶ್ನೆಗಳನ್ನು ದಾಟಬೇಕಿದೆ. 15ನೇ ಸರಣಿಯ ಕೌನ್ ಬನೇಗಾ ಕರೋಡ್ಪತಿಯಲ್ಲಿ ಪಂಜಾಬ್‌ನ ಖಲ್ರಾ ಎಂಬ ಸಣ್ಣ ಹಳ್ಳಿಯಿಂದ ಬಂದಿರುವ ಜಸ್ಕರನ್ ಸಿಂಗ್ ಕೋಟಿ ಗೆದ್ದಿದ್ದಾರೆ. ಈ ಆವೃತ್ತಿಯ ಮೊದಲ ಕೋಟಿ ಬಹುಮಾನ ಇದಾಗಿದೆ.
ಮಂಗಳವಾರದ ಸಂಚಿಕೆಯಲ್ಲಿ ಜಸ್ಕರನ್ ಸಿಂಗ್ 7 ಕೋಟಿಯ ಅಂತಿಮ ಪ್ರಶ್ನೆಯನ್ನು ಎದುರಿಸಿದರು. ಆದರೆ, ಅದಕ್ಕೆ ಉತ್ತರ ತಿಳಿಯದೇ ಹಿಂದೆ ಸರಿದ ಕಾರಣ 1 ಕೋಟಿ ತಮ್ಮದಾಗಿಸಿ ಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಮಂಗಳವಾರ ಜಸ್ಕರನ್ ಸಿಂಗ್ಗೆ ಕೇಳಿದ 7 ಕೋಟಿ ರೂ ಪ್ರಶ್ನೆ ಹೀಗಿದೆ.. "ಪದ್ಮ ಪುರಾಣದ ಪ್ರಕಾರ, ಜಿಂಕೆಯ ಶಾಪದಿಂದ ನೂರು ವರ್ಷಗಳ ಕಾಲ ಯಾವ ರಾಜ ಹುಲಿಯಾಗಿ ಬದುಕಿದ್ದ? ಆಯ್ಕೆಗಳೆಂದರೆ: ಎ) ಕ್ಷೇಮಧೂರ್ತಿ ಬಿ) ಧರ್ಮದತ್ತ ಸಿ) ಮಿತಧ್ವಜ ಡಿ) ಪ್ರಭಂಜನ.
ಜಸ್ಕರನ್ ಈಗಾಗಲೇ ₹1 ಕೋಟಿಯ ಪ್ರಶ್ನೆಗೆ ಯಶಸ್ವಿಯಾಗಿ ಉತ್ತರಿಸುವ ಮೂಲಕ ಋತುವಿನ ಮೊದಲ ಕೋಟ್ಯಾಧಿಪತಿಯಾಗಿದ್ದರು. 14 ಪ್ರಶ್ನೆಗಳಿಗೆ ಉತ್ತರಿಸಿ 1 ಕೋಟಿ ಗೆದ್ದಿದ್ದ, ಜಸ್ಕರನ್ ಸಿಂಗ್ ಉತ್ತರ ಸರಿಯಾಗಿ ತಿಳಿದಿರದ ಕಾರಣ ಈ ಪಶ್ನೆಯಿಂದ ಹಿಂದೆ ಸರಿದರು. ಹೀಗಾಗಿ 1 ಕೋಟಿ ಅವರ ಪಾಲಿಗಾಯಿತು. ಈ ಪ್ರಶ್ನೆಯ ಸರಿಯಾದ ಉತ್ತರ ಡಿ) ಪ್ರಭಂಜನ ಆಗಿತ್ತು.