ಕತಿಹಾರ್(ಬಿಹಾರ): ಕರ್ನಾಟಕ, ತಮಿಳುನಾಡು ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಆನ್ಲೈನ್ ಜೂಜಾಟ ಸಂಪೂರ್ಣವಾಗಿ ನಿಷೇಧಗೊಂಡಿರುವ ಕಾರಣ ಜನಪ್ರೀಯ ಗೇಮಿಂಗ್ ಆ್ಯಪ್ ಡ್ರೀಮ್ 11 ಕೂಡ ಸ್ಥಗಿತಗೊಂಡಿದೆ. ಆದರೆ ಬಿಹಾರ, ಉತ್ತರ ಪ್ರದೇಶದ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಈಗಲೂ ಈ ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಅನೇಕರು ಈ ಆ್ಯಪ್ ಮೂಲಕ ಡ್ರೀಮ್ 11 ಆಡುತ್ತಿದ್ದಾರೆ.
ಮ್ 11ನಿಂದ 1 ಕೋಟಿ ರೂ. ಗೆದ್ದ! ಸದ್ಯ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ನ ಡ್ರೀಮ್ 11 ಆಡುವ ಮೂಲಕ ಬಿಹಾರದ ಕತಿಹಾರ್ ಜಿಲ್ಲೆಯ ಪ್ಲಂಬರ್ವೋರ್ವ ಬರೋಬ್ಬರಿ 1 ಕೋಟಿ ರೂ. ಗೆದ್ದಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದ ವೇಳೆ ಕನಸಿನ ತಂಡ ಕಣಕ್ಕಿಳಿಸುವ ಮೂಲಕ ಪ್ಲಂಬರ್ 1 ಕೋಟಿ ರೂ. ಗೆದ್ದಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಡ್ರೀಮ್ 11 ಕಡೆಯಿಂದ ಆತನಿಗೆ ಸಂದೇಶ ಕೂಡ ಬಂದಿದೆ.
ಇದನ್ನೂ ಓದಿರಿ:ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕ್ಷೌರಿಕ.. 'ಡ್ರೀಮ್ ಇಲೆವೆನ್'ನಿಂದ ಹಣ ಗೆದ್ದು ಬೀಗಿದ..
ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ ಬಬ್ಲು ಮಂಡಲ್ ಮೊಬೈಲ್ನಲ್ಲಿ ಆತನ ಜೊತೆ ಕೆಲಸ ಮಾಡ್ತಿದ್ದ ವ್ಯಕ್ತಿವೋರ್ವ ಡ್ರೀಮ್ 11 ಆ್ಯಪ್ ಡೌನ್ ಲೋಡ್ ಮಾಡಿದ್ದಾನೆ. ಕಳೆದ 10 ದಿನಗಳಿಂದ ಈತ ಈ ಗೇಮ್ ಆಡುತ್ತಿದ್ದು, ಚೆನ್ನೈ-ಡೆಲ್ಲಿ ತಂಡಗಳ ನಡುವಿನ ಪಂದ್ಯದ ವೇಳೆ ಸಹ ಕನಸಿನ ತಂಡ ಕಣಕ್ಕಿಳಿಸಿದ್ದನು.
ಈ ವೇಳೆ 1 ಕೋಟಿ ರೂ. ಗೆದ್ದಿದ್ದಾನೆ. ಈಗಾಗಲೇ ಆತನ ಅಕೌಂಟ್ಗೆ 70 ಲಕ್ಷ ರೂ. ಜಮಾವಣೆ ಸಹ ಮಾಡಲಾಗಿದೆಯಂತೆ. ಇಷ್ಟೊಂದು ಹಣ ಪಡೆದುಕೊಳ್ಳುತ್ತಿದ್ದಂತೆ ಆತನ ಕುಟುಂಬದಲ್ಲಿ ಸಂತೋಷ ದ್ವಿಗುಣಗೊಂಡಿದ್ದು, ಈ ಹಣದಿಂದ ಹೊಸದಾಗಿ ಮನೆ ಕಟ್ಟಿಸುವುದಾಗಿ ಹೇಳಿದ್ದಾನೆ. ಜೊತೆಗೆ ದೇವಸ್ಥಾನಕ್ಕೆ ಸ್ವಲ್ಪ ಹಣ ದೇಣಿಗೆ ರೂಪದಲ್ಲಿ ನೀಡುವುದಾಗಿ ತಿಳಿಸಿದ್ದಾನೆ. ಈ ಹಿಂದೆ ಕೂಡ ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕನೋರ್ವ ಡ್ರೀಮ್ 11 ಆಡುವ ಮೂಲಕ 1 ಕೋಟಿ ರೂ. ಗೆದ್ದಿದ್ದನು.