ಕೊಲ್ಹಾಪುರ (ಮಹಾರಾಷ್ಟ್ರ): ಎರಡು ದಿನಗಳ ಹಿಂದೆ ಮೌಂಟ್ ಎವರೆಸ್ಟ್ ಏರುವ ತನ್ನ ಕನಸನ್ನು ಕೊಲ್ಲಾಪುರದ ಯುವತಿ (20) ಕಸ್ತೂರಿ ಸಾವೇಕರ್ ಕೊನೆಗೂ ಈಡೇರಿಸಿಕೊಂಡಿದ್ದಾಳೆ. ಜಗತ್ತಿನ ಅತಿ ಎತ್ತರದ ಮತ್ತು ಅತ್ಯಂತ ಕಷ್ಟಕರವಾದ ಪರ್ವತವಾದ ಮೌಂಟ್ ಎವರೆಸ್ಟ್ ಅನ್ನು ಏರಿ ಕೊನೆಗೂ ತಮ್ಮ ಕನಸನ್ನು ಈಡೇರಿಸಿಕೊಂಡಿದ್ದಾರೆ. ಈ ಮೂಲಕ ಕೊಲ್ಲಾಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮೇ 9 ರಂದು ಮೌಂಟ್ ಎವರೆಸ್ಟ್ ಏರಲು ಆರಂಭಿಸಿದ ಇವರು ಮೇ 14 ರಂದು ಎವರೆಸ್ಟ್ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ಕೊಲ್ಹಾಪುರಕ್ಕೆ ಹೆಸರು ತಂದಿದ್ದಾರೆ. ದುರಂತ ಎಂದರೆ ಆರ್ಥಿಕ ಸಮಸ್ಯೆಯಿಂದ ತುಂಬಾನೆ ಕಷ್ಟಪಟ್ಟಿದ್ದಾರೆ. ಜೊತೆಗ ಈಗಲೂ ಅದರಿಂದ ನರಳುತ್ತಿದ್ದಾರೆ.
ಮೌಂಟ್ ಎವರೆಸ್ಟ್ ಏರಲು ಭಾರಿ ವೆಚ್ಚ: ಮೌಂಟ್ ಎವರೆಸ್ಟ್ ಏರಲು ಸುಮಾರು 50 ಲಕ್ಷ ರೂ. ಬೇಕು. ಆದರೆ, ಮಗಳ ಹಠ ಕಂಡು ಕಸ್ತೂರಿ ಸಾವೇಕರ್ ಅವರ ತಂದೆ ದೀಪಕ್ ಸಾವೇಕರ್ ಅವರಿಗೆ ಅನೇಕರು ಸಹಾಯ ಮಾಡಿದ್ದರು. ಕೆಲವು ಉದಾರಿಗಳು ಸಹ ಅವರಿಗೆ ಉಚಿತವಾಗಿ ಹಣ ನೀಡಿದ್ದರು. ಇದೆಲ್ಲವನ್ನೂ ಸೇರಿ ಒಟ್ಟು 28 ಲಕ್ಷದ 56 ಸಾವಿರ ರೂ. ಆಗಿತ್ತು.