ಕರ್ನಾಟಕ

karnataka

ETV Bharat / bharat

ಇತ್ತೀಚೆಗಿನ ನಾಗರಿಕರ ಹತ್ಯೆ ಪ್ರಕರಣದಲ್ಲಿ ಕಾಶ್ಮೀರಿಗಳ ಪಾತ್ರವಿಲ್ಲ: ಫಾರೂಖ್ ಅಬ್ದುಲ್ಲಾ - farooq-abdullah

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹತ್ಯೆಗಳು ಇಲ್ಲಿನ ಶಾಂತಿಯುತ ವಾತಾವರಣ ಕದಡುವ ಪ್ರಯತ್ನವಾಗಿದೆ. ಕಾಶ್ಮೀರಿಗಳ ಗೌರವಕ್ಕೆ ಧಕ್ಕೆ ತರಲು ಇಂಥಾ ಕೃತ್ಯಗಳು ನಡೆಯುತ್ತಿವೆ. ಈ ಪ್ರಕರಣಗಳಲ್ಲಿ ಕಾಶ್ಮೀರಿಗಳು ಭಾಗಿಯಾಗಿಲ್ಲ ಎಂದು ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ. ಇದೇ ವೇಳೆ ಅವರು ಉಗ್ರರ ಕೃತ್ಯಗಳನ್ನು ಖಂಡಿಸುವ ಪ್ರಯತ್ನವನ್ನಾಗಲಿ ಅಥವಾ ಉಗ್ರರಿಗೆ ಸದಾ ಬೆಂಬಲ ನೀಡುತ್ತಿರುವ ಪಾಕಿಸ್ತಾನ ನಡೆಯನ್ನು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ.

farooq-abdullah
ಫಾರೂಖ್ ಅಬ್ದುಲ್ಲಾ

By

Published : Oct 18, 2021, 7:13 AM IST

Updated : Oct 18, 2021, 7:55 AM IST

ಶ್ರೀನಗರ: ಇತ್ತೀಚೆಗೆ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ 11 ಮಂದಿ ಅಮಾಯಕ ನಾಗರಿಕರ ಹತ್ಯೆ ಪ್ರಕರಣದಲ್ಲಿ ಕಾಶ್ಮೀರಿಗಳ ಪಾತ್ರವಿಲ್ಲ. ಈ ದಾಳಿಗಳನ್ನು ಕಾಶ್ಮೀರಿಗಳಿಗೆ ಅಪಖ್ಯಾತಿ ಉಂಟುಮಾಡಲು ನಡೆಸಲಾಗುತ್ತಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.

ಇದರ ಜೊತೆಗೆ, ಇಂಥ ಘಟನೆಗಳು ಕೇಂದ್ರಾಡಳಿತ ಪ್ರದೇಶದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಲು ಎಸಗಲಾಗುತ್ತಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 'ಇಂಥ ಘಟನಾವಳಿಗಳು ದುರಾದೃಷ್ಟಕರ. ಇದೊಂದು ಪಿತೂರಿ. ಕಾಶ್ಮೀರಗಳ ಗೌರವಕ್ಕೆ ಧಕ್ಕೆ ತರಲು ಈ ಕೃತ್ಯಗಳು ನಡೆಯುತ್ತಿವೆ. ಈ ಪ್ರಕರಣಗಳಲ್ಲಿ ಕಾಶ್ಮೀರಿಗಳು ಭಾಗಿಯಾಗಿಲ್ಲ' ಎಂದು ಅವರು ತಿಳಿಸಿದರು.

ಇತ್ತೀಚೆಗಿನ ನಾಗರಿಕರ ಹತ್ಯೆ ಪ್ರಕರಣದಲ್ಲಿ ಕಾಶ್ಮೀರಿಗಳ ಪಾತ್ರವಿಲ್ಲ: ಫಾರೂಖ್ ಅಬ್ದುಲ್ಲಾ

ಶ್ರೀನಗರ ಲೋಕಸಭೆ ಕ್ಷೇತ್ರದ ಸದಸ್ಯರೂ ಆಗಿರುವ ಫಾರುಖ್ ಅಬ್ದುಲ್ಲಾ, ಕಣಿವೆ ನಾಡಿನ ಶಾಂತಿಯುವ ವಾತಾವರಣವನ್ನು ಹಾಳು ಮಾಡುವ ಉದ್ದೇಶವೇ ಇಂಥ ಕೃತ್ಯಗಳ ಹಿಂದಿರುವ ಉದ್ದೇಶ ಎಂದರು.

ನಿನ್ನೆ (ಶನಿವಾರ) ಇಬ್ಬರು ಕಾಶ್ಮೀರೇತರ (ಸ್ಥಳೀಯ ನಿವಾಸಿಗಳಲ್ಲದ) ಜನರನ್ನು ಶ್ರೀನಗರದ ಪುಲ್ವಾಮದಲ್ಲಿ ಉಗ್ರರು ಕೊಂದು ಹಾಕಿದ್ದರು. ಇದಕ್ಕೂ ಮುನ್ನ 9 ಮಂದಿ ನಾಗರಿಕರನ್ನು ಹತ್ಯೆಗೈದಿದ್ದು ಇದರಲ್ಲಿ 6 ಮಂದಿ ಅಲ್ಪಸಂಖ್ಯಾತ (ಹಿಂದೂ) ಸಮುದಾಯಯಕ್ಕೆ ಸೇರಿದವರಾಗಿದ್ದರು. ಈ ಮೂಲಕ ಕಾಶ್ಮೀರಿ ಪಂಡಿತರು ಸೇರಿದಂತೆ ಅಮಾಯಕ ಕಾಶ್ಮೀರೇತರ ನಾಗರಿಕರಲ್ಲಿ ಭಯ, ಆತಂಕ ಸೃಷ್ಟಿಯಾಗಿತ್ತು. ಈ ಘಟನಾವಳಿಗಳ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತೆಯ ಬಗ್ಗೆ ಕಳವಳ ಹಾಗು ರಾಜಕೀಯ ನಾಯಕರ ಮೇಲೂ ದೇಶಾದ್ಯಂತ ವ್ಯಾಪಕ ಮಟ್ಟದಲ್ಲಿ ಟೀಕೆಗಳೂ ವ್ಯಕ್ತವಾಗಿದ್ದವು.

ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಿನ ಎನ್‌ಎಸ್‌ಎ (ರಾಷ್ಟ್ರೀಯ ಭದ್ರತಾ ಸಲಹೆಗಾರರು-NSA) ಮಟ್ಟದ ಮಾತುಕತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಬ್ದುಲ್ಲಾ, ಗೆಳೆತನಕ್ಕೆ ದಾರಿ ಮಾಡುವ ಯಾವುದೇ ಹೆಜ್ಜೆಯೂ ಸ್ವಾಗತಾರ್ಹ ಎಂದು ಹೇಳಿದರು.

ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲಿ ಎಂದು ನಾವು ಬಯಸಬೇಕು ಮತ್ತು ಈ ನಿಟ್ಟಿನಲ್ಲಿ ಪ್ರಾರ್ಥಿಸಬೇಕಿದೆ ಎಂದು ಅಬ್ದುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕುಲ್ಗಾಂನಲ್ಲಿ ಉಗ್ರರ ಅಟ್ಟಹಾಸ.. ಇಬ್ಬರು ಅಪರಿಚಿತರ ಹತ್ಯೆ, ಓರ್ವನ ಸ್ಥಿತಿ ಗಂಭೀರ..

Last Updated : Oct 18, 2021, 7:55 AM IST

ABOUT THE AUTHOR

...view details