ಕರ್ನಾಟಕ

karnataka

ETV Bharat / bharat

ಚಳಿಗೆ ನಡುಗುತ್ತಿರುವ ದೆಹಲಿ; ಹಿಮಪಾತದ ನಿರೀಕ್ಷೆಯಲ್ಲಿ ಕಾಶ್ಮೀರ - ಉತ್ತರ ಭಾರತದಲ್ಲಿ ಚಳಿ

ಕಣಿವೆಗಳು ಭಾರೀ ಚಳಿಯಿಂದಾಗಿ ಹೆಪ್ಪುಗಟ್ಟಿದ್ದು, ನೀರಿಗಾಗಿ ಜನರು ತೊಂದರೆ ಪಡುವಂತೆ ಆಗಿದೆ.

Kashmiris little hope of snowfall in sight
Kashmiris little hope of snowfall in sight

By ETV Bharat Karnataka Team

Published : Jan 4, 2024, 11:45 AM IST

ನವದೆಹಲಿ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಮುಂದುವರೆದಿದ್ದು, ದೆಹಲಿಯಲ್ಲಿ ತಾಪಮಾನ 7 ಡಿಗ್ರಿಗೆ ಕುಸಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ಸಾಮಾನ್ಯ ತಾಪಮಾನ 7.7 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದ್ದು, ಸಾಧಾರಣ ಮಂಜು ಕವಿದ ವಾತಾವರಣ ಕಂಡು ಬಂದಿದೆ. ಗುರುವಾರ ಬೆಳಗ್ಗೆ ನಗರದಲ್ಲಿ ಗೋಚರತೆ ಪ್ರಮಾಣ 500 ಮೀಟರ್​ ಆಗಿದೆ.

ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್​ ಆಗಿರಲಿದೆ ಎಂದು ಐಎಂಡಿ ಅಂದಾಜಿಸಿದೆ. ಮಂಜು ಕವಿದ ವಾತಾವರಣ ಹಿನ್ನಲೆ 26 ರೈಲುಗಳು ಆಗಮನದ ಸಮಯದಲ್ಲಿ ವ್ಯತ್ಯಯ ಕಂಡು ಬಂದಿದೆ. ದೆಹಲಿ ಹೊರತಾಗಿ ಉತ್ತರ ಭಾರತದ ಬಹುತೇಕ ಕಡೆ ಚಳಿ ಮತ್ತು ಮಂಜು ಕವಿತ ಹವಾಮಾನ ಹಿನ್ನಲೆ ಈ ವಿಳಂಬ ಆಗಿದೆ. ಇನ್ನು ಅತಿ ಹೆಚ್ಚಿನ ವಿಳಂಬ ಸಮಯ ಎಂದರೆ ಆರು ಗಂಟೆ ಆಗಿದೆ ಎಂದು ವರದಿ ತಿಳಿಸಿದೆ. ಇನ್ನು ಚಳಿ ಹಿನ್ನಲೆ ದೆಹಲಿಯ ವಾಯುಗುಣಮಟ್ಟ ಕೂಡ ಕುಸಿತ ಕಂಡಿದೆ.

ಕಾಶ್ಮೀರದಲ್ಲಿ ಹಿಮಪಾತ:

ಕಣಿವೆ ರಾಜ್ಯದಲ್ಲಿ ಚಳಿ ತೀವ್ರತೆ ಹೆಚ್ಚಿದ್ದು, ಗುರುವಾರ ಹಿಮಪಾತದ ಭರವಸೆ ನೀಡಿದೆ. ಇನ್ನು ಮುಂದಿನ 10 ದಿನಗಳ ಕಾಲ ಕಾಶ್ಮೀರದಲ್ಲಿ ಯಾವುದೇ ಹಿಮಪಾತವಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಿಲ್ಲೈ ಕಾಲನ್​​ನಲ್ಲಿ ಸಾಕಷ್ಟ ಪ್ರಮಾಣ ಹಿಮಪಾತ ಕಂಡು ಬಂದಿಲ್ಲ. ಇದೆ ರೀತಿ ಪರಿಸ್ಥಿತಿ ಕಂಡು ಬಂದರೆ ಇದರಿಂದ ವಿಪತ್ತು ಎದುರಿಸಬೇಕಾಗುತ್ತದೆ ಎಂದು ಶಬೀರ್​ ಅಹ್ಮದ್​ ಭಟ್​​ ತಿಳಿಸಿದ್ದಾರೆ.

ಕಣಿವೆಗಳು ಭಾರೀ ಚಳಿಯಿಂದಾಗಿ ಹೆಪ್ಪುಗಟ್ಟಿದ್ದು, ನೀರಿಗಾಗಿ ಜನರು ತೊಂದರೆ ಪಡುವಂತೆ ಆಗಿದೆ. ನೀರಿನ ಸರಬರಾಜು ಪೈಪ್​ಗಳು ಕೂಡ ಹೆಪ್ಪುಗಟ್ಟುತ್ತಿರುವ ಹಿನ್ನಲೆ ಕುಡಿಯುವ ನೀರಿನ ಬೇಡಿಕೆ ಹೆಚ್ಚಿದೆ. ಶ್ರೀನಗರದಲ್ಲಿ ಗುರುವಾರ ಸಾಮಾನ್ಯ ತಾಪಮಾನ ಮೈನಸ್​ 3.8 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಗುಲ್ಮರ್ಗ್​ ಮತ್ತು ಪಗಲ್ಗಮ್​ನಲ್ಲಿ ಕ್ರಮವಾಗಿ 4.2 ಮತ್ತು 5.1 ಡ್ರಿಗ್ರಿ ಸೆಲ್ಸಿಯಸ್​ ದಾಖಲಾಗಿದೆ.

ಲಡಾಕ್​ ಪ್ರದೇಶದಲ್ಲಿ ಲೇ ನಗರದಲ್ಲಿ ಮೈನಸರ್​ 14.1, ಕಾರ್ಗಿಲ್​ನಲ್ಲಿ ಮೈನಸರ್​ 14.3, ಡ್ರಾಸ್​ನಲ್ಲಿ ಮೈನಸ್​​ 12.1 ಡಿಗ್ರಿ ಸೆಲ್ಸಿಯಸ್​ ತಾಪಮಾನ ರಾತ್ರಿ ಸಮಯದಲ್ಲಿ ದಾಖಲಾಗಿದೆ.

ಕಣಿವೆ ರಾಜ್ಯದಲ್ಲಿ ಚಳಿಗಾಲ ಎಂದು ಕರೆಯಲ್ಪಡುವ ಚಿಲ್ಲೈ ಕಲಾನ್ 40 ದಿನಗಳ ದೀರ್ಘಾವಧಿಯ ಚಳಿಗಾಲ ಆಗಿದೆ. ಇದು ಚಳಿಯು ಡಿಸೆಂಬರ್ 21 ರಂದು ಪ್ರಾರಂಭವಾಗಿ ಜನವರಿ 30 ರಂದು ಕೊನೆಗೊಳ್ಳುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: 2024ರಲ್ಲಿ ಎಷ್ಟು ಗ್ರಹಣಗಳು ನಡೆಯುತ್ತೆ, ಭಾರತದಲ್ಲಿ ಗೋಚರಿಸುವ ವಿಸ್ಮಯಗಳೆಷ್ಟು?

ABOUT THE AUTHOR

...view details