ಕರ್ನಾಟಕ

karnataka

ETV Bharat / bharat

ಹಜ್​ ಯಾತ್ರಿಕರಿಗೆ ಆರತಿ ಬೆಳಗಿ ಸ್ವಾಗತಿಸಿದ ಕಾಶ್ಮೀರಿ ಹಿಂದೂಗಳು... ವಿಡಿಯೋ - ಹಜ್​ ಯಾತ್ರಿಕರನ್ನ ಆರತಿ ಬೆಳಗಿ ಸ್ವಾಗತಿಸಿದ ಕಾಶ್ಮೀರಿ ಹಿಂದೂಗಳು

ಹಜ್ ಯಾತ್ರಿಕರನ್ನು ಹಿಂದೂಗಳು ಅದ್ಧೂರಿಯಾಗಿ ಸ್ವಾಗತಿ, ಕಣಿವೆ ರಾಜ್ಯದಲ್ಲಿ ಸಾಮರಸ್ಯದ ಸಂದೇಶ ಸಾರಿದ್ದಾರೆ.

Warm welcome Hajj Pilgrims in Srinagar Airport
Warm welcome Hajj Pilgrims in Srinagar Airport

By

Published : Jul 16, 2022, 5:28 PM IST

ಶ್ರೀನಗರ(ಜೆ&ಕೆ):ಪವಿತ್ರ ಹಜ್ ಯಾತ್ರೆ ಕೈಗೊಂಡಿದ್ದ ಯಾತ್ರಿಕರನ್ನ ಕಾಶ್ಮೀರಿ ಹಿಂದೂಗಳು ಶ್ರೀನಗರದಲ್ಲಿ ಆರತಿ ಬೆಳಗಿ, ಗುಲಾಬಿ ನೀಡುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಹಜ್ ಯಾತ್ರಿಕರನ್ನು ಬರಮಾಡಿಕೊಂಡಿದ್ದು, ಕಾಶ್ಮೀರಿ ಪಂಡಿತರು, ಸಿಖ್ ಸಮುದಾಯದವರು ಉಪಸ್ಥಿತರಿದ್ದರು.

ಮೆಕ್ಕಾದಿಂದ 145 ಯಾತ್ರಾರ್ಥಿಗಳ ಮೊದಲ ಬ್ಯಾಚ್​ ಇಂದು ಶ್ರೀನಗರದ ಶೇಖ್​ ಉಲ್​ ಆಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಈ ವೇಳೆ ಅವರಿಗೆ ಆರತಿ ಬೆಳಗಿ, ಗುಲಾಬಿ ಹೂವು ನೀಡಿ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಪ್ರತಿ ವರ್ಷ ಸಾವಿರಾರು ಯಾತ್ರಾರ್ಥಿಗಳು ಹಜ್​ ಪ್ರವಾಸ ಕೈಗೊಳ್ಳುತ್ತಾರೆ. ಈ ಸಲವೂ ಒಟ್ಟು 8 ಸಾವಿರ ಜನರು ತೆರಳಿದ್ದು, ಇದರಲ್ಲಿ 7 ಸಾವಿರ ಯಾತ್ರಿಕರು ಜಮ್ಮು-ಕಾಶ್ಮೀರಕ್ಕೆ ಸೇರಿದವರಾಗಿದ್ದಾರೆ.

ಹಜ್​ ಯಾತ್ರಾರ್ಥಿಗಳನ್ನ ಆರತಿ ಬೆಳಗಿ ಸ್ವಾಗತಿಸಿದ ಕಾಶ್ಮೀರಿ ಹಿಂದೂಗಳು...

ಇದನ್ನೂ ಓದಿರಿ:ಕೆಂಪು ಬಟ್ಟೆಯಲ್ಲಿ ರಶ್ಮಿಕಾ... ನೀವು ಸಖತ್ ಹಾಟ್​ ಎಂದ ನೆಟಿಜನ್ಸ್​!

ಸಹೋದರತೆ ಮತ್ತು ಧಾರ್ಮಿಕ ಸಾಮರಸ್ಯದ ಪ್ರತೀಕವಾಗಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಿಜೆಪಿ ಶಾಸಕ ಅಬ್ಬಾಸ್ ಮುಖ್ತಾರ್ ಅನ್ಸಾರಿ ಈ ವಿಡಿಯೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ABOUT THE AUTHOR

...view details