ಸೋಫಿಯಾನ (ಜಮ್ಮು-ಕಾಶ್ಮೀರ): ಕಣಿವೆ ನಾಡು ಜಮ್ಮು- ಕಾಶ್ಮೀರದಲ್ಲಿ ಒಂದೇ ದಿನ ಎರಡು ಕಡೆ ಪ್ರತ್ಯೇಕ ಗುಂಡಿನ ದಾಳಿಗಳು ನಡೆದಿವೆ. ಸೋಮವಾರ ಸಂಜೆ ನಡೆದ ಉಗ್ರರ ದಾಳಿಯಲ್ಲಿ ಕಾಶ್ಮೀರಿ ಪಂಡಿತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಕ್ಷಿಣ ಕಾಶ್ಮೀರದ ಸೋಫಿಯಾನ ಜಿಲ್ಲೆಯಲ್ಲಿ ಚೋಟೋಗಾಮ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಾಯಾಳವನ್ನು ಸೋನು ಕುಮಾರ್ ಬಲ್ಜಿ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಸೋನು ಅಂಗಡಿಯೊಂದು ನಡೆಸುತ್ತಿದ್ದ ಈ ವೇಳೆ, ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ.