ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಕಳೆದ ತಿಂಗಳು ಕಾಶ್ಮೀರ ಪಂಡಿತರೊಬ್ಬರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ(ಎಸ್‌ಐಎ) ಬುಧವಾರ ದಕ್ಷಿಣ ಕಾಶ್ಮೀರದ ಪುಲ್ವಾಮಾದ ಅಚಾನ್ ಗ್ರಾಮದಲ್ಲಿ ದಾಳಿ ನಡೆಸಿದೆ.
ಸ್ಥಳೀಯ ಪೊಲೀಸರು- ಸಿಆರ್‌ಪಿಎಫ್ ನೆರವಿನೊಂದಿಗೆ ಎಸ್‌ಐಎ ದಾಳಿ:ಫೆಬ್ರವರಿ 26 ರಂದು ಪುಲ್ವಾಮಾದ ಈ ಸ್ಥಳೀಯ ಹಳ್ಳಿ ಅಚಾನ್‌ನಲ್ಲಿ ಶಂಕಿತ ಉಗ್ರಗಾಮಿಗಳು ಕಾಶ್ಮೀರಿ ಪಂಡಿತರಾದ ಸಂಜಯ್ ಶರ್ಮಾ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಈ ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಂಸ್ಥೆಯು ಅಚಾನ್‌ನಲ್ಲಿ ದಾಳಿ ನಡೆಸಿದೆ ಎಂದು ಎಸ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್‌ನ ನೆರವಿನೊಂದಿಗೆ ದಾಳಿ ನಡೆಸಲಾಗಿದೆ.
ಇದನ್ನೂ ಓದಿ:ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ
ಸಂಜಯ್ ಶರ್ಮಾ ಎದೆಗೆ ಬಿದ್ದಿದ್ದವು ಮೂರು ಗುಂಡು:ಸಂಜಯ್ ಶರ್ಮಾ (40) ಬ್ಯಾಂಕ್ ಎಟಿಎಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಡಿಎಸ್ಪಿ ಶ್ರೇಣಿಯ ಅಧಿಕಾರಿ ನೇತೃತ್ವದ ಎಸ್‌ಐಎ ತಂಡವು ಸ್ಥಳಕ್ಕೆ ಆಗಮಿಸಿ ದಾಳಿಕೋರರು ಪರಾರಿಯಾಗಿರುವ ಬಗ್ಗೆ ಮತ್ತು ಸ್ಥಳೀಯ ಜನರಿಂದ ಪ್ರಕರಣದ ವಿವಿಧ ಅಂಶಗಳ ಬಗ್ಗೆ ಮಾಹಿತಿ ಪಡೆದರು. ಶರ್ಮಾ ಅವರ ಎದೆಗೆ ಮೂರು ಗುಂಡುಗಳು ತಗುಲಿದ್ದವು. ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ಇದನ್ನೂ ಓದಿ:ಮುಂಬೈ: ಸಚಿವಾಲಯದ ಮುಂದೆ ಇಬ್ಬರು ಮಹಿಳೆಯರು, ಓರ್ವ ದಿವ್ಯಾಂಗ ವ್ಯಕ್ತಿಯಿಂದ ಆತ್ಮಹತ್ಯೆ ಯತ್ನ