ಭುವನೇಶ್ವರ (ಒಡಿಶಾ):ಇಲ್ಲಿನ ಸಿಐಡಿ ಕ್ರೈಂ ಬ್ರಾಂಚ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶನಿವಾರ ಪ್ರಧಾನಿ ಕಚೇರಿಯ ಅಧಿಕಾರಿ, ನ್ಯೂರೋ ಸ್ಪೆಷಲಿಸ್ಟ್ ವೈದ್ಯ, ಸೇನಾ ವೈದ್ಯ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದ ಕಾಶ್ಮೀರಿ ವ್ಯಕ್ತಿಯನ್ನು ಬಂಧಿಸಿದೆ. ಬಂಧಿತನನ್ನು ಸೈಯದ್ ಇಶಾನ್ ಬುಖಾರಿ ಅಲಿಯಾಸ್ ಇಶಾನ್ ಬುಖಾರಿ (37) ಎಂದು ಗುರುತಿಸಲಾಗಿದೆ. ಇಶಾನ್ ಬುಖಾರಿ ಕೆಲವು ಉನ್ನತ ಮಟ್ಟದ ಎನ್‌ಐಎ ಅಧಿಕಾರಿಗಳ ನಿಕಟ ಸಹವರ್ತಿಯಂತೆ ಹೇಳಿಕೊಂಡಿದ್ದ. ಅಲ್ಲದೇ ದೇಶ ವಿರೋಧಿಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ವಂಚನೆ ಮತ್ತು ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾಶ್ಮೀರ ಪೊಲೀಸರಿಗೆ ಈತ ಬೇಕಾಗಿದ್ದ. ಅಲ್ಲದೇ ಇಶಾನ್ ಬುಖಾರಿ ಕಾಶ್ಮೀರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಒಡಿಶಾ ಸೇರಿದಂತೆ ಭಾರತದ ವಿವಿಧ ಭಾಗಗಳಿಂದ ಕನಿಷ್ಠ 6-7 ಹುಡುಗಿಯರನ್ನು ಮದುವೆಯಾಗಿದ್ದಾನೆ. ಅಂತಾರಾಷ್ಟ್ರೀಯ ವಿವಿಗಳಲ್ಲಿ ವೈದ್ಯಕೀಯ ಪದವಿ ಪಡೆದಿರುವ ನಕಲಿ ಪ್ರಮಾಣ ಪತ್ರವನ್ನು ಹೊಂದಿರುವುದಲ್ಲದೇ, ವಿವಿಧ ವೆಬ್‌ಸೈಟ್‌ಗಳಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.
"ಇಶಾನ್ ಬುಖಾರಿ ಕೇರಳದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಕೆಲವು ಪಾಕಿಸ್ತಾನಿ ಪ್ರಜೆಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಕಂಡು ಬಂದಿದೆ. ದಾಳಿ ವೇಳೆ 100ಕ್ಕೂ ಹೆಚ್ಚು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ನ್ಯೂರೋ ಸ್ಪೆಷಲಿಸ್ಟ್ ಡಾಕ್ಟರ್, ಆರ್ಮಿ ಡಾಕ್ಟರ್, ಪಿಎಂಒ ಅಧಿಕಾರಿ, ಕೆಲವು ಉನ್ನತ ಮಟ್ಟದ ಎನ್‌ಐಎ ಅಧಿಕಾರಿಗಳ ನಿಕಟವರ್ತಿಯಂತೆ ನಟಿಸುತ್ತಿರುವುದು ಪತ್ತೆಯಾಗಿದೆ" ಎಂದು ಎಸ್‌ಟಿಎಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.