ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಹವಾಮಾನ ಕುರಿತು ವ್ಯಾಪಕ ವರದಿ ಮಾಡಿದ್ದಕ್ಕಾಗಿ ಕಾಶ್ಮೀರಿ ಪತ್ರಕರ್ತ ಸಮಾನ್ ಲತೀಫ್ ಅವರಿಗೆ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರು ಪ್ರತಿಷ್ಠಿತ ಹವಾಮಾನ ಬದಲಾವಣೆ ಪ್ರಶಸ್ತಿ ನೀಡಿ ಗೌರವಿಸಿದರು.
ವಿಶ್ವಸಂಸ್ಥೆಯ ಕರೆಸ್ಪಾಂಡೆಂಟ್ ಅಸೋಸಿಯೇಷನ್‌ನ ಪ್ರಕಾರ, ಪತ್ರಕರ್ತ ಸಮಾನ್ಗೆ ಕಂಚಿನ ಪದಕ ಮತ್ತು ನಗದು ಬಹುಮಾನವನ್ನು ಮೊನಾಕೊದ ಪ್ರಿನ್ಸ್ ಆಲ್ಬರ್ಟ್ II ಮತ್ತು ಹವಾಮಾನ ಬದಲಾವಣೆಯ ವರದಿಗೆ UNCA ಗ್ಲೋಬಲ್ ಪ್ರಶಸ್ತಿ ನೀಡಲಾಗಿದೆ.
ಟೆಲಿಗ್ರಾಫ್ ಯುಕೆ, ಡಿಡಬ್ಲ್ಯೂ ಜರ್ಮನಿ ಮತ್ತು ಇತರ ಪ್ರಮುಖ ಸುದ್ದಿ ಸಂಸ್ಥೆಗಳಿಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಭಾರತದಲ್ಲಿನ ಹವಾಮಾನ ಬಿಕ್ಕಟ್ಟಿನ ಕುರಿತು ವರದಿ ಮಾಡಿದ್ದಾರೆ. ಭಾರತದಲ್ಲಿನ ಉಷ್ಣ ಅಲೆ ಮತ್ತು ಪಾಕಿಸ್ತಾನದಲ್ಲಿ ಪ್ರವಾಹದ ಜೊತೆಗೆ, ಸಮಾನ್ ಕಾಶ್ಮೀರದ ವಿವಾದಿತ ಪ್ರದೇಶದಲ್ಲಿನ ಆರ್ಥಿಕ ಜೀವನಕ್ಕೆ ಸವಾಲು ಹಾಕುವ ಪರಿಸರದ ಸಮಸ್ಯೆಗಳ ಅನನ್ಯ ವಿಷಯಗಳ ಬಗ್ಗೆ ವರದಿಯಲ್ಲಿ ಬೆಳಕು ಚಲ್ಲಲಾಗಿದೆ.
ಪತ್ರಕರ್ತ ಸಮಾನ್ ಲತೀಫ್ ಕಳೆದ ನಾಲ್ಕು ವರ್ಷಗಳಿಂದ ದಕ್ಷಿಣ ಏಷ್ಯಾದ ವರದಿಗಾರನಾಗಿ ಡೈಲಿ ಟೆಲಿಗ್ರಾಫ್ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ:ಗೋಧಿ ಚೀಲ ಕದ್ದ ಆರೋಪಿಯನ್ನ ಟ್ರಕ್ ಬಾನೆಟ್ಗೆ ಕಟ್ಟಿ ಠಾಣೆಗೆ ಕರೆದೊಯ್ದ ಚಾಲಕ..!