ಶ್ರೀನಗರ (ಜಮ್ಮು&ಕಾಶ್ಮೀರ) :ವಯಸ್ಸಾದ ಕಾಶ್ಮೀರಿ ಮಹಿಳೆಯೊಬ್ಬರು ಇಂಗ್ಲಿಷ್ ಮಾತನಾಡುವ 36 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಶೇರ್ ಮತ್ತು ಕಮೆಂಟ್ ಪಡೆಯುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಡಿಎಸ್‌ಪಿ ಸೈಯದ್ ಸಲೀತ್ ಷಾ ಅವರು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, ಯುವಕನೊಬ್ಬ ಕಾಶ್ಮೀರಿ ಭಾಷೆಯಲ್ಲಿ ಹಣ್ಣು, ತರಕಾರಿಗಳ ಹೆಸರು ಹೇಳಿದಾಗ 80ರ ಹರೆಯದ ಮಹಿಳೆ ಅವಕ್ಕೆ ಇಂಗ್ಲಿಷ್ನಲ್ಲಿ ಏನು ಹೇಳುತ್ತಾರೆ ಎಂದು ಹೇಳುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.