ಜಮ್ಮು:ಶ್ರೀನಗರದ ಬಟಮಾಲೂನಲ್ಲಿರುವ ಸಶಸ್ತ್ರ ಸುರಕ್ಷಾ ಬಲ್ (ಎಸ್‌ಎಸ್‌ಬಿ)ನ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಬಟಮಾಲೂನ ಸಶಸ್ತ್ರ ಸುರಕ್ಷಾ ಬಲ್ ಶಿಬಿರದಲ್ಲಿ ಅಗ್ನಿ ಅವಘಡ - sashastra suraksha bal news
ಜಮ್ಮು ಕಾಶ್ಮೀರದ ಬಟಮಾಲೂನಲ್ಲಿ ಸಶಸ್ತ್ರ ಸುರಕ್ಷಾ ಬಲ್ ಶಿಬಿರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದೆ.
ಸಶಸ್ತ್ರ ಸುರಕ್ಷಾ ಬಲ್ ಶಿಬಿರದಲ್ಲಿ ಅಗ್ನಿ ಅವಘಡ
ಪೊಲೀಸ್ ಮೂಲಗಳ ಪ್ರಕಾರ, ಬಟಮಾಲೂ ಶಿಬಿರದಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಶಿಬಿರಕ್ಕೆ ತೀವ್ರ ಹಾನಿಯಾಗಿದೆ. ಈ ವೇಳೆ, ಅಗ್ನಿಶಾಮಕದಳ ಮತ್ತು ತುರ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಿಯಂತ್ರಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಶಿಬಿರದಲ್ಲಿ ನಿಯೋಜಿಸಲಾದ ಎಲ್ಲ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿವೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.