ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರದಲ್ಲಿ ತಪ್ಪಿದ ಭಾರಿ ದುರಂತ: ಭಯೋತ್ಪಾದಕರ ಸಹಚರ ಅರೆಸ್ಟ್​, ಐದಾರು ಕೆಜಿ ಐಇಡಿ ಸ್ಫೋಟಕ ವಶಕ್ಕೆ

ಪುಲ್ವಾಮಾ ಪೊಲೀಸರು ಭಯೋತ್ಪಾದಕರ ಸಹಚರನೊಬ್ಬನನ್ನು ಬಂಧಿಸಿ, ಐಇಡಿ ಸ್ಫೋಟಕವನ್ನು ವಶಪಡಿಸಿಕೊಂಡಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

kashmir-police-seized-an-ied-explosive-and-terrorist-accomplice
ಭಯೋತ್ಪಾದಕ ಸಹಚರ ಸೇರಿ ಐಇಡಿ ಸ್ಫೋಟಕ ವಶಪಡಿಸಿಕೊಂಡ ಪೊಲೀಸರು..

By

Published : May 7, 2023, 5:30 PM IST

ಪುಲ್ವಾಮಾ (ಜಮ್ಮು ಮತ್ತು ಕಾಶ್ಮೀರ):ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಾನುವಾರ ಭಯೋತ್ಪಾದಕರ ಸಹಚರನೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿ, ನಂತರ ಸುಧಾರಿತ ಸ್ಫೋಟಕ ಸಾಧನ (ಐಇಡಿ)ವನ್ನು ವಶಪಡಿಸಿಕೊಂಡಿವೆ. " ಪುಲ್ವಾಮಾ ಪೊಲೀಸರು ಭಯೋತ್ಪಾದಕ ಸಹಚರ ಇಶ್ಫಾಕ್ ಅಹ್ಮದ್ ವಾನಿ ಆರ್ ಅಲಿಯಾಸ್​ ಒ ಅರಿಗಮ್ ಪುಲ್ವಾಮಾನನ್ನು ಬಂಧಿಸುವ ಮೂಲಕ ಮತ್ತು ಐಇಡಿ (ಅಂದಾಜು 5-6 ಕೆಜಿ) ಅನ್ನು ವಶಪಡಿಸಿಕೊಂಡು ದೊಡ್ಡ ದುರಂತವನ್ನು ತಪ್ಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ" ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಜಮ್ಮುವಿನ ರಾಜೌರಿ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಉಗ್ರರು ನಡೆಸಿದ ಐಇಡಿ ಸ್ಫೋಟದಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಈಟಿವಿ ಭಾರತ ಈಗಾಗಲೇ ವರದಿ ಮಾಡಿದಂತೆ, ಕಾಶ್ಮೀರದ ಭದ್ರತಾ ಪಡೆಗಳು ಲೋನ್ ವುಲ್ಫ್ ಭಯೋತ್ಪಾದನೆ ರೂಪದಲ್ಲಿ ಹೊಸ ಸವಾಲನ್ನು ಎದುರಿಸುತ್ತಿವೆ. ಅಲ್ಲಿ ಯಾವುದೇ ಸಂಘಟನೆಯ ಔಪಚಾರಿಕವಾಗಿ ಭಾಗವಲ್ಲದ ಭಯೋತ್ಪಾದಕರು ಇಂತಹ ದಾಳಿಗಳನ್ನು ನಡೆಸುತ್ತಾರೆ. ಇದರಿಂದಾಗಿ ಅವರ ಮೇಲೆ ಕಣ್ಗಾವಲು ಇಡುವುದು ಭದ್ರತಾ ಪಡೆಗಳಿಗೆ ಕಷ್ಟಕರವಾಗಿದೆ.

ಇನ್ನು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ತಿಂಗಳ ಕೊನೆಯಲ್ಲಿ ಜಿ20 ಪ್ರವಾಸೋದ್ಯಮ ಸಭೆಯನ್ನು ಆಯೋಜಿಸಲಾಗಿದೆ. ಈ ಕಾರಣದಿಂದಾಗಿ ಪೊಲೀಸರು ಮತ್ತು ಇತರ ಭದ್ರಾತ ಪಡೆಗಳು ಈ ಪ್ರದೇಶದಲ್ಲಿ ಸುರಕ್ಷತೆ ಮತ್ತು ಹೆಚ್ಚಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಜೀವಂತವಾಗಿಡಲು ಪಾಕಿಸ್ತಾನವು ಉಗ್ರರಿಗೆ ಹಣವನ್ನು ಸಾಗಿಸಲು ಡ್ರೋನ್​ಗಳನ್ನು ಬಳಸುತ್ತಿದೆ ಎಂದು ಮಾರ್ಚ್ ನಲ್ಲಿ ಜೆ & ಕೆ ಪೊಲೀಸರು ಹೇಳಿದ್ದರು.

ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಮಾತನಾಡಿ, " ಇತ್ತೀಚೆಗೆ ಹಣವನ್ನು ಡ್ರೋನ್​ಗಳ ಮೂಲಕ ಮತ್ತು ಪಾಕಿಸ್ತಾನ ಮೂಲದ ಏಜೆನ್ಸಿಗಳು ಐಇಡಿಗಳೊಂದಿಗೆ ಕಳುಹಿಸುತ್ತಿವೆ. ಮಾದಕವಸ್ತುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಈಗ ಪಾಕಿಸ್ತಾನದಿಂದ ಕಳ್ಳಸಾಗಣೆ ಮಾಡಲಾಗುತ್ತಿದೆ. ಈ ಶಸ್ತ್ರಾಸ್ತ್ರಗಳು ನೇರವಾಗಿ ಭಯೋತ್ಪಾದಕರ ಕೈಗೆ ಸೇರುತ್ತೀವೆ " ಎಂದು ಹೇಳಿದ್ದರು. ಇನ್ನು "ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ 20 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಗಳನ್ನು ಸುಗಮವಾಗಿ ನಡೆಸಲು ನಾವು ಸಾಧ್ಯವಿರುವ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ತೆಲಂಗಾಣ-ಛತ್ತೀಸ್‌ಗಢ ಗಡಿಯಲ್ಲಿ ಇಬ್ಬರು ಮಾವೋವಾದಿಗಳ ಹತ್ಯೆ

ABOUT THE AUTHOR

...view details