ಶ್ರೀನಗರ (ಜಮ್ಮು ಕಾಶ್ಮೀರ): ಬುಧವಾರ ರಾತ್ರಿ ಶ್ರೀನಗರದಲ್ಲಿ ಮೈನಸ್ 8.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, 30 ವರ್ಷಗಳ ಬಳಿಕ ಅತಿಶೀತ ರಾತ್ರಿಗೆ ಶ್ರೀನಗರ ಸಾಕ್ಷಿಯಾಗಿದೆ.
1991ರಲ್ಲಿ -11.3 ಡಿಗ್ರಿ ಸೆಲ್ಸಿಯಸ್ ಹಾಗೂ 1995ರಲ್ಲಿ 8.3 ಡಿಗ್ರಿ ಸೆಲ್ಸಿಯಸ್ ತಾಪಮಾನ ಶ್ರೀನಗರದಲ್ಲಿ ದಾಖಲಾಗಿತ್ತು. ಈಗ ದಾಖಲಾಗಿರುವ ತಾಪಮಾನದಿಂದಾಗಿ ದಾಲ್ ಸರೋವರ ಸೇರಿದಂತೆ ನೀರಿನ ಮೂಲಗಳು ಭಾಗಶಃ ಮಂಜುಗಡ್ಡೆಯಂತಾಗುತ್ತದೆ. ರಸ್ತೆಗಳು ಸಹ ಹಿಮಾವೃತವಾಗಿದ್ದು, ವಾಹನ ಚಾಲನೆಗೆ ಅಪಾಯಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.