ಹೈದರಾಬಾದ್: ಇರಾನ್‌ನ ಕಠಿಣ ಹಿಜಾಬ್ ಕಾನೂನುಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕಾಗಿ ಕಳೆದ ವಾರ ಟೆಹ್ರಾನ್‌ನಲ್ಲಿ ನೈತಿಕ ಪೊಲೀಸರಿಂದ ಬಂಧನಕ್ಕೊಳಗಾದ 22 ವರ್ಷದ ಯುವತಿ ಮಹ್ಸಾ ಅಮಿನಿ ಎಂಬುವರು ಕೋಮಾಕ್ಕೆ ಜಾರಿ ಬಳಿಕ ಸಾವನ್ನಪ್ಪಿದ್ದರು. ಆಕೆಯ ಸಾವನ್ನು ವಿರೋಧಿಸಿ ಇರಾನ್‌ನಲ್ಲಿ ಭಾರಿ ಪ್ರಮಾಣ ಪ್ರತಿಭಟನೆ ನಡೆಯುತ್ತಿದ್ದು ವಿಶ್ವಾದ್ಯಂತ ಇರಾನ್ ಮಹಿಳೆಯರ ಹಕ್ಕುಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ತಲೆಕೂದಲು ಕತ್ತರಿಸಿ ಇರಾನ್ ಮಹಿಳೆಯರಿಂದ ತೀವ್ರ ಆಕ್ರೋಶ: ಅಮಿನಿ ಹತ್ಯೆಯನ್ನು ವಿರೋಧಿಸಿದ ಇರಾನ್ ಮಹಿಳೆಯರು ತಮ್ಮ ತಲೆಕೂದಲು ಕತ್ತರಿಸಿಕೊಂಡು, ಹಿಜಾಬ್ ತೆಗೆದು ಖಂಡನೆ ವ್ಯಕ್ತಪಡಿಸುವ ಮೂಲಕ ಭಾರಿ ಆಕ್ರೋಶ ಹೊರಹಾಕಿದ್ದಾರೆ. 2005 ರಲ್ಲಿ ಜಾರಿಗೆ ತಂದ ನಿಯಮಗಳ ಪ್ರಕಾರ, ದೇಶದ ನೈತಿಕ ಪೊಲೀಸರು ಹಿಜಾಬ್ ಕಾನೂನುಗಳನ್ನು ಹೇರುವ ಜವಾಬ್ದಾರಿ ಹೊಂದಿದ್ದಾರೆ. ಅಯತೊಲ್ಲಾ ಖಮೇನಿಯ ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್‌ಮೆಂಟ್ 1979 ರಲ್ಲಿ ಜನಾಭಿಪ್ರಾಯ ಸಂಗ್ರಹಿದ ಬಳಿಕ ದೇಶದಲ್ಲಿ ಮಹಿಳೆಯರು ಹಿಜಾಬ್ ಧರಿಸುವುದು ಅಂದರೆ ತಲೆಯನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಿಕೊಳ್ಳುವುದನ್ನು ಕಡ್ಡಾಯಗೊಳಿಸಿತ್ತು.
ಇದನ್ನೂ ಓದಿ:ಹಿಜಾಬ್ ಧರಿಸದ್ದಕ್ಕೆ ನೈತಿಕ ಪೊಲೀಸ್ಗಿರಿ.. ಚಿತ್ರಹಿಂಸೆಗೆ ನರಳಿ ಕೋಮಾದಲ್ಲೇ ಪ್ರಾಣಬಿಟ್ಟ ಯುವತಿ!
'ಲಿಂಗ ತಾರತಮ್ಯದ ಕ್ರಮದಿಂದ ಬೇಸತ್ತು ಹೋಗಿದ್ದೇವೆ': ಅಂದಿನಿಂದ ದೇಶದಲ್ಲಿ ಕಠಿಣ ಇಸ್ಲಾಮಿಕ್ ಕಾನೂನುಗಳು ಜಾರಿಯಲ್ಲಿವೆ. ಮಹಿಳೆಯರು ತಮ್ಮ ಮನೆಯಿಂದ ಹೊರ ಹೋದಾಗ ಬಟ್ಟೆಯಿಂದ ತಲೆ ಮುಚ್ಚಿಕೊಳ್ಳುವುದು ಕಡ್ಡಾಯ. ಚಿಕ್ಕ ವಯಸ್ಸಿನಿಂದಲೇ ನಾವು ಹಿಜಾಬ್ ಧರಿಸದೇ ಹೋದರೆ ನಮಗೆ ಶಾಲೆಗೆ ಹೋಗುವ ಅವಕಾಶವಿಲ್ಲ ಮತ್ತು ನೌಕರಿಯೂ ಸಿಗುವುದಿಲ್ಲ, ಲಿಂಗ ತಾರತಮ್ಯದ ಈ ಆಳ್ವಿಕೆಯಿಂದ ನಾವು ಬೇಸತ್ತು ಹೋಗಿದ್ದೇವೆ ಎಂದು ಪ್ರತಿಭಟನಾನಿರತ ಕೆಲ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
ಇರಾನ್ ಕಠಿಣ ಹಿಜಾಬ್ ಕಾನೂನು ಹೇಗಿದೆ?: ಇರಾನ್‌ನ ಶರಿಯಾ ಅಥವಾ ಇಸ್ಲಾಮಿಕ್ ಕಟ್ಟಳೆಗಳ ಪ್ರಕಾರ, ಮಹಿಳೆಯರು ತಮ್ಮ ತಲೆಗೂದಲನ್ನು ಮುಚ್ಚಬೇಕು ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಬೇಕು. ಇದನ್ನು ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಶಿಕ್ಷಿಸಲಾಗುತ್ತದೆ ಅಥವಾ ಜುಲ್ಮಾನೆ ವಿಧಿಸಲಾಗುತ್ತದೆ. ಅಷ್ಟೇ ಸೆರೆಮನೆಗೂ ಕಳಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಹೋರಾಟಗಾರರು ಕಠಿಣ ನಿಯಮ ಮತ್ತು ‘ಅನೈತಿಕ ವರ್ತನೆ’ ಅಂತ ಪೊಲೀಸರು ಕ್ರಮ ಜರುಗಿಸುತ್ತಿದ್ದರೂ ಹಿಜಾಬ್‌ಗಳನ್ನು ತ್ಯಜಿಸಿರಿ ಎಂದು ಮಹಿಳೆಯರನ್ನು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:ಹಿಜಾಬ್ ಧರಿಸಿ ಓಣಂ ಆಚರಿಸಿದ ವಿದ್ಯಾರ್ಥಿನಿಯರು: ವಿಡಿಯೋ ವೈರಲ್
ಜಗತ್ತಿನೆಲ್ಲೆಡೆಯಿಂದ ಹಿಜಾಬ್‌ಗೆ ವಿರೋಧ: ಇಸ್ಲಾಮಿಕ್ ಕಾನೂನು ಅಳವಡಿಕೆ ಕುರಿತು ಭುಗಿಲೆದ್ದ ಪ್ರತಿಭಟನೆಗೆ ಇತರೆ ದೇಶಗಳಲ್ಲಿ ನೆಲೆಸಿರುವ ಇರಾನಿಯನ್ ಮಹಿಳೆಯರೂ ಸಹ ಬೆಂಬಲ ಸೂಚಿಸಿದ್ದಾರೆ. ಇರಾನಿನ ಪತ್ರಕರ್ತ ಮಸಿಹ್ ಅಲಿನೆಜಾದ್ ಸದ್ಯಕ್ಕೆ ಯುಎಸ್ನಲ್ಲಿ ನೆಲೆಸಿದ್ದು, ಅವರನ್ನು 1994 ರಲ್ಲಿ ಟೆಹ್ರಾನ್‌ನಲ್ಲಿ ಸರ್ಕಾರಿ ವಿರೋಧಿ ಕರಪತ್ರಗಳನ್ನು ಮುದ್ರಿಸಿದ್ದಕ್ಕಾಗಿ ಬಂಧಿಸಲಾಗಿತ್ತು. ಇರಾನಿನ ಮಹಿಳೆಯರಿಗೆ ಸಂಬಂಧಿಸಿದ ಹಿಜಾಬ್ ನಿಯಮಗಳು ಮತ್ತು ಇತರೆ ಹಕ್ಕುಗಳ ವಿರುದ್ಧ ಅವರು ಧ್ವನಿಯೆತ್ತಿದ್ದರು. ಕುತೂಹಲಕಾರಿ ವಿಷಯವೇನೆಂದ್ರೆ, ಅಲ್ಲಿ ಕೇವಲ ಹಿಜಾಬ್ ನಿಯಮಗಳಷ್ಟೇ ಮಹಿಳೆಯರ ಮೇಲೆ ಹೇರಲಾಗುತ್ತಿಲ್ಲ, ಜೊತೆಗೆ ಮಹಿಳೆಯರು ಒಬ್ಬಂಟಿಯಾಗಿ ಹಾಡುಗಳನ್ನು ಹಾಡುವುದಕ್ಕೂ ಸಹ ಕಡಿವಾಣ ಹಾಕಲಾಗಿದೆ.