ಕರ್ನಾಟಕ

karnataka

ETV Bharat / bharat

ಅಕ್ರಮ ಮೀನುಗಾರಿಕೆ ಆರೋಪ: ತಮಿಳುನಾಡಿನಲ್ಲಿ ಕರ್ನಾಟಕದ ಮೂರು ಬೋಟ್​, 20 ಲಕ್ಷ ರೂ ಮೌಲ್ಯದ ಮೀನು ವಶ

ತಮಿಳುನಾಡು ಸರ್ಕಾರ ನಿಷೇಧಿಸಿರುವ ಮೀನುಗಳನ್ನು ಅಕ್ರಮವಾಗಿ ಹಿಡಿಯುತ್ತಿದ್ದ ಕರ್ನಾಟಕದ ಬೋಟ್​ಗಳನ್ನು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Karnataka boats
ಅಕ್ರಮ ಮೀನುಗಾರಿಕೆ

By

Published : Dec 20, 2022, 9:01 AM IST

ಕನ್ಯಾಕುಮಾರಿ(ತಮಿಳುನಾಡು):ತಮಿಳುನಾಡು ಸರ್ಕಾರ ನಿರ್ಬಂಧ ವಿಧಿಸಿದ್ದರೂಅರಬ್ಬಿ ಸಮುದ್ರದಲ್ಲಿ ಕರ್ನಾಟಕದ ಕೆಲವರು ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದಾರೆ ಎಂದು ತಮಿಳುನಾಡು ಕರಾವಳಿಯ ಗ್ರಾಮಗಳ ಮೀನುಗಾರರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮೂರು ಬೋಟ್​ಗಳನ್ನು ಕುಳಚಲದ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕಳೆದ ಶುಕ್ರವಾರ (ಡಿ.16) ಕರ್ನಾಟಕ ಮೀನುಗಾರರು ಅರಬ್ಬಿ ಸಮುದ್ರದ ನಿಷೇಧಿತ ಪ್ರದೇಶದಲ್ಲಿ ಮೀನುಗಳನ್ನು ಹಿಡಿಯುತ್ತಿರುವ ಬಗ್ಗೆ ತಮಿಳುನಾಡು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿದ ನಂತರ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ನಂತರ 3 ನಾಡದೋಣಿಗಳಲ್ಲಿ ಕರ್ನಾಟಕ ಮತ್ತು ಆಂಧ್ರದ 30 ಮೀನುಗಾರರನ್ನು ವಿಚಾರಣೆ ಒಳಪಡಿಸಿದ್ದಾರೆ. ಈ ವೇಳೆ ಲಕ್ಷ ರೂಪಾಯಿ ಮೌಲ್ಯದ ಸವಳ ಮೀನುಗಳನ್ನು ಅಕ್ರಮವಾಗಿ ಹಿಡಿದಿರುವುದು ಬೆಳಕಿಗೆ ಬಂದಿದೆ.

ಮೀನುಗಳನ್ನು ವಶಕ್ಕೆ ಪಡೆದು ಕರ್ನಾಟಕದ ಮೂರು ಬೋಟ್‌ಗಳ ಮಾಲೀಕರ ವಿರುದ್ಧ ತಮಿಳುನಾಡು ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ವಶಕ್ಕೆ ಪಡೆದ ಮೀನುಗಳನ್ನು 20 ಲಕ್ಷಕ್ಕೆ ಹರಾಜು ಮಾಡಲಾಗಿದೆ. ಕರ್ನಾಟಕದ ಬೋಟ್​ನಲ್ಲಿ ತಮಿಳುನಾಡಿನ ಕಾರ್ಮಿಕರೇ ಹೆಚ್ಚಾಗಿ ಇದ್ದರು ಎಂದು ತಿಳಿದು ಬಂದಿದೆ.

ಆಳ ಸಮುದ್ರದಲ್ಲಿ ಸವಳ ಮೀನು ಹಿಡಿಯಲು ಟ್ರಾಲರ್‌ಗಳಿಗೆ ಯಾವುದೇ ನಿರ್ಬಂಧವಿಲ್ಲ. ಆದರೆ ಕರಾವಳಿ ಭಾಗದಲ್ಲಿ ನಾಡದೋಣಿಗಳಿಂದ ಸವಳ ಮೀನುಗಳನ್ನು ಹಿಡಿಯುವುದರಿಂದ ಸಮುದ್ರ ಸಂಪತ್ತಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮೀನುಗಾರಿಕೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಕಾಲುವೆಯಲ್ಲಿ ಈಜಲು ಹೋದ ವಿದ್ಯಾರ್ಥಿಗಳು ನೀರುಪಾಲು.. ಮುಂದುವರಿದ ಶೋಧ ಕಾರ್ಯ

ABOUT THE AUTHOR

...view details