ಕರ್ನಾಟಕ

karnataka

ETV Bharat / bharat

ಗಗನಕ್ಕೇರಿದ ಟೊಮೆಟೋ ಬೆಲೆ.. ಉಳಿದ ತರಕಾರಿ, ಹಣ್ಣುಗಳ ಇಂದಿನ ದರ ಹೀಗಿದೆ..! - ಕರ್ನಾಟಕ ರಾಜ್ಯಾದ್ಯಂತ ಮಾರುಕಟ್ಟೆ ಮತ್ತು ಹಣ್ಣಿನ ಬೆಲೆ

ಟೊಮೆಟೊ ದರದಲ್ಲಿ ಏರಿಕೆಯಾಗಿದ್ದು, ಬೀನ್ಸ್ ಮತ್ತು ಸೊಪ್ಪಿನ ದರದಲ್ಲಿ ಇಳಿಕೆ ಕಂಡುಬಂದಿದ್ದು, ಉಳಿದ ತರಕಾರಿ ದರ ಯಥಾಸ್ಥಿತಿ ಇದೆ.

Karnataka market rate today, Karnataka Statewide market and fruit price, Fruits market daily Price list in Karnataka, ಇಂದು ಕರ್ನಾಟಕ ಮಾರುಕಟ್ಟೆ ದರ, ಕರ್ನಾಟಕ ರಾಜ್ಯಾದ್ಯಂತ ಮಾರುಕಟ್ಟೆ ಮತ್ತು ಹಣ್ಣಿನ ಬೆಲೆ, ಕರ್ನಾಟಕದಲ್ಲಿ ಹಣ್ಣುಗಳ ಮಾರುಕಟ್ಟೆ ದೈನಂದಿನ ಬೆಲೆ ಲಿಸ್ಟ್​,
ತರಕಾರಿ ಬೆಲೆ

By

Published : May 28, 2022, 10:46 AM IST

ಬೆಂಗಳೂರು: ರಾಜ್ಯದಲ್ಲಿ ಹಣ್ಣು, ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಟೊಮೆಟೋ, ಅವರೆಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯೇ ದರ ಹೆಚ್ಚಳಕ್ಕೆ ಕಾರಣವಾಗ್ತಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ಬಂಗಾನಪಲ್ಲಿ ಮಾವಿನಹಣ್ಣು 69 ರೂ., ಸಿಂಧೂರ 66 ರೂ., ರಸಪುರಿ 85 ರೂ., ಮಲ್ಲಿಕಾ 95 ರೂ., ತೋತಾಪುರಿ ಮಾವಿನಹಣ್ಣಿಗೆ 25 ರೂ. ಇದೆ. ಸೇಬು 229 ರೂ. ಗೆ ದೊರೆಯುತ್ತಿದ್ದು, ಕೆಂಪು ಸೇಬು 199 ರೂ., ಶಿಮ್ಲಾ ಸೇಬು 159 ರೂ., ಮೂಸಂಬಿ 75 ರೂ., ಸಪೋಟ 72 ರೂ., ದಾಳಿಂಬೆ 230 ರೂ., ಸೀಬೆ ಹಣ್ಣು 72 ರೂ., ಅನಾನಸ್‌​ 67 ರೂ., ಪಪ್ಪಾಯಿ 37 ರೂ., ಪಚ್ಚೆ ಬಾಳೆಹಣ್ಣು 31 ರೂ., ಏಲಕ್ಕಿ ಬಾಳೆಹಣ್ಣು 78 ರೂ., ಕಲ್ಲಂಗಡಿ 17 ರೂ., ಕಲ್ಲಂಗಡಿ (ಕಿರಣ್) 10 ರೂ., ಕರ್ಬೂಜ 25 ರೂ. ಗೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿಗೆ): ಹುರಳೀಕಾಯಿ 102 ರೂ., ಬದನೆಕಾಯಿ (ಬಿಳಿ) 64 ರೂ., ಬದನೆಕಾಯಿ (ಗುಂಡು) 45 ರೂ., ಬೀಟ್‍ರೂಟ್ 35 ರೂ., ಹಾಗಲಕಾಯಿ 56 ರೂ., ಸೌತೆಕಾಯಿ 48 ರೂ., ದಪ್ಪಮೆಣಸಿನಕಾಯಿ 74 ರೂ., ಹಸಿಮೆಣಸಿನಕಾಯಿ 60 ರೂ., ತೆಂಗಿನಕಾಯಿ ದಪ್ಪ 35 ರೂ., ನುಗ್ಗೇಕಾಯಿ 115 ರೂ., ಈರುಳ್ಳಿ ಮಧ್ಯಮ 20 ರೂ., ಸಾಂಬಾರ್ ಈರುಳ್ಳಿ 47 ರೂ., ಆಲೂಗಡ್ಡೆ 37 ರೂ., ಮೂಲಂಗಿ 36 ರೂ., ಟೊಮೆಟೋ 85 ರೂ., ಬೆಳ್ಳುಳ್ಳಿ 96 ರೂ., ನಿಂಬೆಹಣ್ಣು 190 ರೂ.ಗೆ ಲಭ್ಯವಾಗುತ್ತಿದೆ.

ಓದಿ:ಕೆಜಿ ಟೊಮೆಟೋಗೆ 95 ರೂಪಾಯಿ: ಹೀಗಿದೆ ಇಂದಿನ ತರಕಾರಿ, ಹಣ್ಣುಗಳ ದರ..

ಸೊಪ್ಪು ಒಂದು ಕಟ್ಟಿಗೆ: ದಂಟಿನ ಸೊಪ್ಪು ಹಸಿರು 10 ರೂ, ದಂಟಿನ ಸೊಪ್ಪು ಕೆಂಪು 10 ರೂ, ಕರಿಬೇವು ಸೊಪ್ಪು 6 ರೂ., ಕೊತ್ತಂಬರಿ ಸೊಪ್ಪು 11ರೂ., ಸಬ್ಬಸಿಗೆ ಸೊಪ್ಪು 11 ರೂ, ಮೆಂತೆ ಸೊಪ್ಪು 13 ರೂ, ಪುದೀನ ಸೊಪ್ಪು 05 ರೂ, ಪಾಲಕ್ ಸೊಪ್ಪು 06 ರೂ, ಈರುಳ್ಳಿ ಸೊಪ್ಪು 14 ರೂ, ಗೋಂಗುರ ಸೊಪ್ಪು 14 ರೂ, ಬಸಳೆ ಸೊಪ್ಪು 09 ರೂ.ಗೆ ಲಭ್ಯವಾಗುತ್ತಿದೆ.

ಮೈಸೂರಲ್ಲಿ ತರಕಾರಿ ದರ:ಬೀನ್ಸ್ 60 ರೂ., ಪೆನ್ಸಿಲ್ ಬೀನ್ಸ್ 70 ರೂ., ಟೊಮೆಟೊ 52 ರೂ., ಸೌತೆಕಾಯಿ 23 ರೂ., ಗುಂಡು ಬದನೆ 24 ರೂ., ಕುಂಬಳಕಾಯಿ 8 ರೂ., ಹೀರೆಕಾಯಿ 28 ರೂ., ಪಡವಲಕಾಯಿ 25 ರೂ., ತೊಂಡೆಕಾಯಿ 45 ರೂ., ಹಾಗಲಕಾಯಿ 25 ರೂ., ಕಾಲಿಫ್ಲವರ್ 30 ರೂ., ದಪ್ಪ ಮೆಣಸು 56 ರೂ., ಸೋರೆಕಾಯಿ 15 ರೂ., ಬದನೆಕಾಯಿ ವೈಟ್ 18 ರೂ., ಕೋಸು 15 ರೂ., ಸೀಮೆಬದನೆ 20 ರೂ., ಬೆಂಡೆಕಾಯಿ 23 ರೂ., ಮೆಣಸಿನಕಾಯಿ 17 ರೂ., ಬಜ್ಜಿ 32 ರೂ.ಗೆ ಸಿಗುತ್ತಿದೆ.

ದಾವಣಗೆರೆ ತರಕಾರಿ ದರ (ಕೆ.ಜಿ) : ಟೊಮೆಟೊ 60 ರೂ., ಬಿನ್ಸ್- 68-80 ರೂ., ದಪ್ಪ ಮೆಣಸಿನ ಕಾಯಿ 25 ರೂ., ಎಲೆಕೋಸು 8-12 ರೂ., ಕಡ್ಡಿ ಮೆಣಸಿನಕಾಯಿ 25 ರೂ., ಬಿಟ್ ರೂಟ್ 15 ರೂ., ಬೆಂಡೆಕಾಯಿ-30 ರೂ., ಹೀರೆಕಾಯಿ 35 ರೂ., ಹಾಗಲಕಾಯಿ 35 ರೂ., ಜವಳಿಕಾಯಿ 40 ರೂ., ಸೌತೆಕಾಯಿ 40 ರೂ., ಕ್ಯಾರೇಟ್ 40 ರೂ., ಬಣ್ಣದ ಸೌತೆ 08 ರೂ., ನವಿಲುಕೋಸು 30 ರೂ., ಮೂಲಂಗಿ 30 ರೂ., ಈರುಳ್ಳಿ 17 ರೂ., ನುಗ್ಗೆಕಾಯಿ 60 ರೂ., ನಿಂಬೆಹಣ್ಣು 100 ಕ್ಕೆ 300 ರೂ., ಬದನೆಕಾಯಿ 15 ರೂ., ಕುಂಬಳಕಾಯಿ 30 ರೂ., ಬೆಳ್ಳುಳ್ಳಿ 30-40 ರೂ., ಸೀಮೆ ಬದನೆಕಾಯಿ 30 ರೂ., ಆಲೂಗೆಡ್ಡೆ 20 ರೂ., ಹೂ ಕೋಸು 30 ರೂ., ಸೋರೆಕಾಯಿ 25 ರೂ., ಹಸಿ ಶುಂಠಿ 55 ರೂ.ಗೆ ಸಿಗುತ್ತಿದೆ.

ಸೊಪ್ಪು ದರದಲ್ಲಿ ಏರಿಕೆ: ಮೆಂತೆಸೊಪ್ಪು100 ಕ್ಕೆ 280 ರೂ., ಕೂತ್ತಂಬರಿಸೊಪ್ಪು 100 ಕ್ಕೆ 340 ರೂ., ಸಬ್ಬಾಸಿಕೆ ಸೊಪ್ಪು100 ಕ್ಕೆ 260 ರೂ., ಪುದಿನಸೊಪ್ಪು100 ಕ್ಕೆ 270 ರೂ., ಪಾಲಕ್ ಸೊಪ್ಪು 100 ಕ್ಕೆ 240 ರೂ., ಸೊಪ್ಪು 100 ಕ್ಕೆ 270 ರೂ.ಗೆ ಸಿಗುತ್ತಿದೆ.

ABOUT THE AUTHOR

...view details