ಕರ್ನೂಲ್ (ಆಂಧ್ರಪ್ರದೇಶ) :ಮಂತ್ರಾಲಯಕ್ಕೆ ತೆರಳಿದ್ದ ಮೈಸೂರು ಮೂಲದ ರಾಘವೇಂದ್ರ ಅನುಮಾನಾಸ್ಪದ ರೀತಿ ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಬಂದಿದ್ದ ಆತ, ಲಾಡ್ಜ್ವೊಂದರಲ್ಲಿ ಉಳಿದುಕೊಂಡಿದ್ದ.
ಎಷ್ಟೊತ್ತಾದರೂ ಆತ ಹೊರಗೆ ಬಾರದಿದ್ದಾಗ, ಲಾಡ್ಜ್ ಮಾಲೀಕರು ಮತ್ತೊಂದು ಬೀಗದ ಸಹಾಯದಿಂದ ಬಾಗಿಲು ತೆರೆದು ಒಳಗೆ ಹೋಗಿದ್ದಾರೆ. ಈ ವೇಳೆ ಅವರ ಮೃತದೇಹ ಪತ್ತೆಯಾಗಿದೆ.