ಉಧಮ್ಪುರ(ಜಮ್ಮು-ಕಾಶ್ಮೀರ):'ಕಾರ್ಗಿಲ್ ವಿಜಯ್ ದಿವಸ್ 2021' ಸಂಭ್ರಮಾಚರಣೆಯ ಅಂಗವಾಗಿ, ಕಾರ್ಯಕ್ರಮಗಳು ಆರಂಭಗೊಂಡಿವೆ. ಕಾರ್ಗಿಲ್ ಯುದ್ಧ ವಿಜಯ ಕಂಡು 22 ವರ್ಷ ಪೂರೈಸಿದ ಸಂಭ್ರಮವನ್ನು ಧ್ವನಿಸಲು ಜಮ್ಮು ಮತ್ತು ಕಾಶ್ಮೀರದ ಉಧಮ್ಪುರದಲ್ಲಿ ಬುಧವಾರದಂದು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.
'ಕಾರ್ಗಿಲ್ ವಿಜಯ್ ದಿವಸ್ 2021' ನಿಮಿತ್ತ ಉಧಮ್ಪುರದಲ್ಲಿ ಸಂಗೀತ ಕಾರ್ಯಕ್ರಮ - Kargil
ಕಾರ್ಗಿಲ್ ಯುದ್ಧ ವಿಜಯ ಕಂಡು 22 ವರ್ಷ ಪೂರೈಸಿದ ಸಂಭ್ರಮವನ್ನು ಧ್ವನಿಸಲು ಜಮ್ಮು ಮತ್ತು ಕಾಶ್ಮೀರದ ಉಧಮ್ಪುರದಲ್ಲಿ ಬುಧವಾರದಂದು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.
!['ಕಾರ್ಗಿಲ್ ವಿಜಯ್ ದಿವಸ್ 2021' ನಿಮಿತ್ತ ಉಧಮ್ಪುರದಲ್ಲಿ ಸಂಗೀತ ಕಾರ್ಯಕ್ರಮ 'Kargil Vijay Diwas' celebrations begin at Army headquarters in JandK's Udhampur](https://etvbharatimages.akamaized.net/etvbharat/prod-images/768-512-12534022-thumbnail-3x2-aaaabbbbbbbbbbbbba.jpg)
ಜಮ್ಮು ಮತ್ತು ಕಾಶ್ಮೀರದ 'ಶೌರ್ಯ ಬ್ಯಾಂಡ್', ಕಾರ್ಗಿಲ್ ಯುದ್ಧದ ವೀರರನ್ನು ಗೌರವಿಸುವ ಸಲುವಾಗಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಉತ್ಸಾಹದಿಂದ ತುಂಬಿದ ಸಂಗೀತ ಸಂಜೆಯನ್ನು ಪ್ರಸ್ತುತಪಡಿಸಲು ಉಧಮ್ಪುರದ ಉತ್ತರ ಕಮಾಂಡ್ನೊಂದಿಗೆ ಸೇರಿಕೊಂಡಿತು ಎಂದು ಸೇನೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ, ಜನರಲ್ ಕಮಾಂಡಿಂಗ್ ಇನ್ ಚೀಫ್, ಉತ್ತರ ಕಮಾಂಡ್, ಸೈನ್ಯದ ಪರಿಣತರು, ಹೆಡ್ ಕ್ವಾರ್ಟರ್ಸ್ ಸದಸ್ಯರು, ಇತರ ಹಿರಿಯ ಅಧಿಕಾರಿಗಳು ಮತ್ತು ಕುಟುಂಬಸ್ಥರು ಸಂಗೀತ ಸಂಜೆಯಲ್ಲಿ ಭಾಗವಹಿಸಿದ್ದರು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಯಿತು. ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಅಚರಿಸಲಾಗುತ್ತದೆ.