ನವದೆಹಲಿ:ಹಥ್ರಾಸ್‌ನ ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಕೇರಳದ ಪತ್ರಕರ್ತ ಕಾಪನ್ ಸಿದ್ದಿಕಿ ಎಂಬವರನ್ನು ಬಂಧಿಸಿತ್ತು. ಇವರು ನಿಷೇಧಿತ ಪಿಎಫ್ಐ ಸಂಘಟನೆಗೆ ಸೇರಿದವರಾಗಿದ್ದು, ಹಥ್ರಾಸ್ನಲ್ಲಿ ಶಾಂತಿ ಕದಡಲು ತೆರಳಿದ್ದರು ಎಂದು ಪೊಲೀಸರು ಬಂಧನ್ಕಕಿದ್ದ ಕಾರಣ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದಿಕಿ ಬಂಧನವನ್ನು ಪ್ರಶ್ನಿಸಿ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ (ಕೆಯುಡಬ್ಲ್ಯೂಜೆ) ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಪತ್ರಕರ್ತರ ಸಂಘದಿಂದ ಸುಪ್ರಿಂಕೋರ್ಟ್‌ಗೆ ಮನವಿ:
ಕಾಪನ್ ಅವರನ್ನು ಪೊಲೀಸರು ಥಳಿಸಿದ್ದು, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ. ಯುಪಿ ಪೊಲೀಸರು ಸುಳ್ಳು ಆರೋಪ ಹಾಗೂ ತಪ್ಪು ಗ್ರಹಿಕೆಯಿಂದ ಸಿದ್ದಿಕಿ ಪಿಎಫ್ಐನ ಸದಸ್ಯ ಎಂದು ಅರೆಸ್ಟ್ ಮಾಡಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಕೋರ್ಟ್ಗೆ ಸಲ್ಲಿಸಲಾದ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ ಸಿದ್ದಿಕಿಗೆ ನಾರ್ಕೋ ಅನಾಲಿಸಿಸ್ ಟೆಸ್ಟ್ ಅಥವಾ ಬ್ರೈನ್ ಮ್ಯಾಪಿಂಗ್, ಸುಳ್ಳು ಪತ್ತೆ ಪರೀಕ್ಷೆ ಅಥವಾ ಯಾವುದೇ ವೈಜ್ಞಾನಿಕ ಪರೀಕ್ಷೆ ನಡೆಸಲು ಅನುಮತಿ ನೀಡುವಂತೆಯೂ ಮನವಿ ಮಾಡಿದ್ದಾರೆ.