ಕಾನ್ಪುರ (ಉತ್ತರಪ್ರದೇಶ): ಜೂನ್ 3 ರಂದು ನಡೆದ ಕಾನ್ಪುರ್ ಹಿಂಸಾಚಾರದಲ್ಲಿ ಆರೋಪಿ ಮುಕ್ತಾರ್ ಬಾಬಾನನ್ನು ಬಂಧಿಸಿದ ನಂತರ ಎಸ್‌ಐಟಿಯ ವಿಚಾರಣೆ ವೇಳೆ ಹಲವು ರಹಸ್ಯಗಳು ಹೊರಬಂದಿವೆ. ಗಲಭೆಯಲ್ಲಿ 500 ರಿಂದ 1000 ರೂಪಾಯಿವರೆಗೆ ಹಣ ನೀಡಿ ಕಲ್ಲು ತೂರಾಟ ನಡೆಸಲು ಹುಡುಗರನ್ನು ಕರೆ ತರಲಾಗಿದೆ ಎಂದು ಆರೋಪಿ ಮುಖ್ತಾರ್ ಬಾಯ್ಬಿಟ್ಟಿದ್ದಾನೆ.
ಶುಕ್ರವಾರದ ಪ್ರಾರ್ಥನೆಯ ನಂತರ ಕಲ್ಲು ತೂರಾಟ ನಡೆಸಬೇಕೆಂದು ಹುಡುಗರಿಗೆ ತಿಳಿಸಲಾಗಿತ್ತು. ಚಂದೇಶ್ವರ ಹಟ ವಶಕ್ಕೆ ಪಡೆಯುವ ಗುರಿ ಮುಖ್ತಾರ್ದಾಗಿತ್ತು. ಈ ಹಿಂದೆಯೂ ಕರಪತ್ರದ ಬಗ್ಗೆ ಕಾನ್ಪುರದಲ್ಲಿ ಗಲಾಟೆ ನಡೆದಿತ್ತು. ಚಂದೇಶ್ವರ ಹಟದಲ್ಲಿ ಸದಾ ಸಂಘರ್ಷದ ಪರಿಸ್ಥಿತಿ ಇರುತ್ತದೆ. ಇದು ಸಂಪೂರ್ಣವಾಗಿ ಸಂಚಿನಿಂದ ನಡೆದ ಗಲಭೆಯಾಗಿದೆ ಎಂದು ಮುಖ್ತಾರ್ ಬಾಬಾ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಎಸ್ಐಟಿ ಹೇಳಿದೆ.