ಕರ್ನಾಟಕ

karnataka

ETV Bharat / bharat

ಮಗುವಿಗೆ ಹಾಲು ಖರೀದಿಸಲು ಹಣ ಕೇಳಿದ್ದಕ್ಕೆ ಪತ್ನಿಗೆ ಫೋನ್​​ನಲ್ಲೇ ತಲಾಖ್​..!

2014 ರಲ್ಲಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಳಿಕ ಅಫ್ಸರ್​ ನಾನು ಅವಳೊಂದಿಗೆ ಸಂಸಾರ ಮಾಡುತ್ತೇನೆ ಎಂದು ಒಪ್ಪಿ ಪುನಃ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ಕಳೆದ ನವೆಂಬರ್ 4, 2020 ರಲ್ಲಿ ಫೋನ್ ಮಾಡಿ ಮಗುವಿಗೆ ಹಾಲು ತರಲು ಹಣ ಕೇಳಿದಾಗ, ತಲಾಖ್ ನೀಡಿದ್ದಾನೆ ಎಂದು ಶಬಾನಾ ಆರೋಪಿಸಿದ್ದಾರೆ.

phone
ತಲಾಖ್​

By

Published : Jan 30, 2021, 1:20 PM IST

ಕಾನ್ಪುರ: ಮನೆ ಬಾಡಿಗೆ ಕಟ್ಟಲು, ಮಗುವಿಗೆ ಹಾಲು ಖರೀದಿಸಲು ಹಣ ಕೇಳಿದ ಹಿನ್ನೆಲೆ ಫೋನ್​ನಲ್ಲಿಯೇ ಪತ್ನಿಗೆ ಪತಿ ತಲಾಖ್ ನೀಡಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ‘

2005 ರಲ್ಲಿ ಪ್ರಯಾಗರಾಜ್‌ನ ಅಫ್ಸರ್ ಅಹ್ಮದ್​ನನ್ನು ಶಬಾನಾ ಬೇಗಂ ವಿವಾಹವಾಗಿದ್ದರು. ಅಂದಿನಿಂದ ಅಫ್ಸರ್​​ ಆಕೆಗೆ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ. ಸಂಸಾರ ಸಾಗಿಸಲು ಹಣ ನೀಡದೆ ಸತಾಯಿಸುತ್ತಿದ್ದನು ಎಂದು ಶಬಾನಾ ಆರೋಪಿಸಿದ್ದಾಳೆ.

ಈ ಎಲ್ಲದ್ದರಿಂದ ಬೇಸತ್ತಿದ್ದ ಶಬಾನಾ, 2014 ರಲ್ಲಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಳಿಕ ಅಫ್ಸರ್​ ನಾನು ಅವಳೊಂದಿಗೆ ಸಂಸಾರ ಮಾಡುತ್ತೇನೆ ಎಂದು ಒಪ್ಪಿ ಪುನಃ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ಕಳೆದ ನವೆಂಬರ್ 4, 2020 ರಲ್ಲಿ ಫೋನ್ ಮಾಡಿ ಮಗುವಿಗೆ ಹಾಲು ತರಲು ಹಣ ಕೇಳಿದಾಗ, ತಲಾಖ್ ನೀಡಿದ್ದಾನೆ ಎಂದು ಶಬಾನಾ ಆರೋಪಿಸಿದ್ದಾರೆ.

ಪೊಲೀಸರಿಗೆ ದೂರು ದಾಖಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಬಳಿಕ ಸಿಎಂ ಪೋರ್ಟಲ್​ಗೆ ಕರೆ ಮಾಡಿ ದೂರು ದಾಖಲಿಸಿದ್ದರು. ಇದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದು ಜನವರಿ 27 ರಂದು ದೂರು ದಾಖಲಿಸಿದ್ದರು.

ABOUT THE AUTHOR

...view details