ಕರ್ನಾಟಕ

karnataka

ETV Bharat / bharat

ಕಾನ್ಪುರ್ ಕೋರ್ಟ್​ನಿಂದ ಮಹತ್ವದ ತೀರ್ಪು: ಇಬ್ಬರು ಬಾಂಗ್ಲಾ ಯುವಕರಿಗೆ 10 ವರ್ಷ ಜೈಲು ಶಿಕ್ಷೆ! - 2019ರ ಬಾಲಕಿ ಅಪಹರಣ ಕೇಸ್​

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಪ್ರಜೆಗಳಿಗೆ ಜೈಲು ಶಿಕ್ಷೆ ವಿಧಿಸಿ ಉತ್ತರ ಪ್ರದೇಶ ಕೋರ್ಟ್​ ಆದೇಶ ಹೊರಡಿಸಿದೆ.

kanpur court
kanpur court

By

Published : Mar 2, 2021, 9:25 PM IST

ಕಾನ್ಪುರ್​(ಉತ್ತರ ಪ್ರದೇಶ): 2019ರಲ್ಲಿ ಬಾಂಗ್ಲಾದೇಶದ ಇಬ್ಬರು ಯುವಕರು ಅಲ್ಲಿನ ಬಾಲಕಿ ಅಪಹರಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರ್ ಕೋರ್ಟ್​ ಮಹತ್ವದ ಆದೇಶ ನೀಡಿದ್ದು, ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಹೊರಬಿದ್ದಿರುವ ವಿಶಿಷ್ಟ ತೀರ್ಪು ಇದಾಗಿದೆ.

ಸಂತ್ರಸ್ತ ಬಾಲಕಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ವಿಚಾರಣೆ ನಡೆಸಿರುವ ನ್ಯಾಯಾಲಯ ಇದೀಗ ವಿದೇಶಿ ಮಹಿಳೆಗೆ ನ್ಯಾಯ ಒದಗಿಸುವ ಉದ್ದೇಶದಿಂದ 10 ವರ್ಷ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: ಅಚಲ ನಂಬಿಕೆ, ವಾತ್ಸಲ್ಯಕ್ಕೆ ತಲೆಬಾಗುವೆ: ಗುಜರಾತ್ ಸ್ಥಳೀಯ​ ಚುನಾವಣೆ ಜಯಭೇರಿ ಬಳಿಕ ನಮೋ ಟ್ವೀಟ್

ಏನಿದು ಪ್ರಕರಣ?

2019ರಲ್ಲಿ ಬಾಂಗ್ಲಾದೇಶದ ಇಬ್ಬರು ಯುವಕರು ಬಾಂಗ್ಲಾದೇಶದ ಬಾಲಕಿಯೊರ್ವಳ ಅಪಹರಣ ಮಾಡಿದ್ದರು. ಭಾರತಕ್ಕೆ ಕರೆತರುತ್ತಿದ್ದ ವೇಳೆ ಅವರನ್ನ ರೈಲಿನಲ್ಲಿ ಬಂಧನ ಮಾಡಲಾಗಿತ್ತು. ಜತೆಗೆ ಕಾನ್ಪುರ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ವಿಚಾರಣೆ ನಡೆಸಿದ ಕೋರ್ಟ್​ ಇದೀಗ ತೀರ್ಪು ನೀಡಿದ್ದು, 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.ವಿದೇಶಿ ಪ್ರಜೆಗಳಿಗೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಶಿಕ್ಷೆ ವಿಧಿಸಲಾಗಿದ್ದು, ಇಂತಹ ಪ್ರಕರಣ ಈ ಹಿಂದೆ ನಡೆದಿಲ್ಲ.

ABOUT THE AUTHOR

...view details