ಕರ್ನಾಟಕ

karnataka

ETV Bharat / bharat

ತರಗತಿಯಲ್ಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಕಣ್ಣೂರಿನ ಶಿಕ್ಷಕನಿಗೆ 79 ವರ್ಷ ಕಠಿಣ ಜೈಲು ಶಿಕ್ಷೆ

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೇ ಅಪರೂಪ ಎನ್ನುವಂತಹ ತೀರ್ಪನ್ನು ಕೇರಳದ ಪೋಕ್ಸೊ ಫಾಸ್ಟ್​ ಟ್ರ್ಯಾಕ್ ಕೋರ್ಟ್​ ನೀಡಿದೆ. ತರಗತಿಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಣ್ಣೂರಿನ ಶಿಕ್ಷಕನಿಗೆ 79 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

ತರಗತಿಯಲ್ಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಶಿಕ್ಷಕನಿಗೆ 79 ವರ್ಷ ಕಠಿಣ ಜೈಲು ಶಿಕ್ಷೆ: ಕೇರಳದ ಫಾಸ್ಟ್​ ಟ್ರ್ಯಾಕ್ ಕೋರ್ಟ್​ ತೀರ್ಪು
lp-school-teacher-sentenced-to-79-years-ri-for-sexually-abusing-children

By

Published : Aug 3, 2022, 8:00 PM IST

Updated : Aug 3, 2022, 8:26 PM IST

ಕಣ್ಣೂರು (ಕೇರಳ): ಶಾಲಾ ತರಗತಿಯಲ್ಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರಿನ ಶಿಕ್ಷಕನಿಗೆ ಇಲ್ಲಿನ ತಳಿಪರಂಬ ಪೋಕ್ಸೊ ಫಾಸ್ಟ್​ ಟ್ರ್ಯಾಕ್ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಿತು. ಅಪರಾಧಿ ಶಿಕ್ಷಕನಿಗೆ 79 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ಹಾಗೂ 2.7 ಲಕ್ಷ ರೂ. ದಂಡ ವಿಧಿಸಿ ಆದೇಶಿಸಲಾಗಿದೆ. ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗೋವಿಂದನ್ ನಂಬೂದರಿ ಪ್ರಕರಣದಲ್ಲಿ ದೋಷಿಯಾಗಿದ್ದಾನೆ.

ಪ್ರಕರಣದ ವಿವರ:2013ರ ಜೂನ್ ಮತ್ತು 2014ರ ಜನವರಿ ತಿಂಗಳ ಆರು ತಿಂಗಳ ಅವಧಿಯಲ್ಲಿ ಶಾಲಾ ತರಗತಿಯಲ್ಲೇ ಐವರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗುರುತರ ಆರೋಪ ಗೋವಿಂದನ್ ನಂಬೂದರಿ ಮೇಲಿತ್ತು. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಐದು ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳಲ್ಲಿ ಶಿಕ್ಷಕನ ವಿರುದ್ಧ ಆರೋಪ ಸಾಬೀತಾಗಿದೆ. ಇನ್ನೊಂದು ಪ್ರಕರಣದಲ್ಲಿ ಆತ ಖುಲಾಸೆಗೊಂಡಿದ್ದಾನೆ. ಇದೀಗ ನಾಲ್ಕು ಪ್ರಕರಣಗಳ ಶಿಕ್ಷೆಯ ಪ್ರಮಾಣವನ್ನು ನ್ಯಾ.ಪಿ.ಮುಜೀಬ್​ ಪ್ರಕಟಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ತಕ್ಷಣವೇ ಶಿಕ್ಷಕನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಪ್ರಕರಣದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಶಾಲೆಯ ಹೆಲ್ಪ್ ಡೆಸ್ಕ್ ಉಸ್ತುವಾರಿ ಶಿಕ್ಷಕಿ ಕೂಡ ಸಿಲುಕಿಕೊಂಡಿದ್ದರು. ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಮಾಹಿತಿ ಇದ್ದರೂ ಮುಚ್ಚಿಟ್ಟ ಆರೋಪ ಈ ಇಬ್ಬರ ಮೇಲಿದೆ. ಆದರೆ ಇವರನ್ನು ಖುಲಾಸೆಗೊಳಿಸಲಾಗಿದೆ.

ಇದನ್ನೂ ಓದಿ:ಹೈದರಾಬಾದ್ ಜ್ಯುಬಿಲಿ ಹಿಲ್ಸ್​ ಗ್ಯಾಂಗ್​ರೇಪ್ ಪ್ರಕರಣ: ಫೋಟೊ ಡಿಲೀಟ್ ಮಾಡುವಂತೆ ದೂರು

Last Updated : Aug 3, 2022, 8:26 PM IST

ABOUT THE AUTHOR

...view details