ಕರ್ನಾಟಕ

karnataka

ಪುನೀತ್ ರಾಜ್​ಕುಮಾರ್​ ಫೈಬರ್ ಪ್ರತಿಮೆ ನಿರ್ಮಿಸಿದ ತೆನಾಲಿ ಶಿಲ್ಪಿಗಳು

ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ ಅವರ ಫೈಬರ್ ವಿಗ್ರಹವನ್ನು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ತಯಾರಿಸಲಾಗಿದೆ.

By

Published : Oct 27, 2022, 9:43 PM IST

Published : Oct 27, 2022, 9:43 PM IST

Updated : Oct 27, 2022, 10:35 PM IST

ಪುನೀತ್ ರಾಜ್​ಕುಮಾರ್​ ಫೈಬರ್ ಪ್ರತಿಮೆಯನ್ನು ನಿರ್ಮಿಸಿದ ತೆನಾಲಿ ಶಿಲ್ಪಿಗಳು
ಪುನೀತ್ ರಾಜ್​ಕುಮಾರ್​ ಫೈಬರ್ ಪ್ರತಿಮೆಯನ್ನು ನಿರ್ಮಿಸಿದ ತೆನಾಲಿ ಶಿಲ್ಪಿಗಳು

ಆಂಧ್ರಪ್ರದೇಶ: ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ ಅವರ 21 ಅಡಿ ಎತ್ತರದ ಬೃಹತ್ ಫೈಬರ್ ವಿಗ್ರಹವನ್ನು ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ತಯಾರಿಸಲಾಗಿದೆ.

ತೆನಾಲಿಯ ಸೂರ್ಯ ಶಿಲ್ಪಾಸಕ್ತರು ಈ ವಿಗ್ರಹವನ್ನು ವಿನ್ಯಾಸಗೊಳಿಸಿದ್ದಾರೆ. ಪುನೀತ್ ಅವರ ಮರಣದ ನಂತರ 3D ವಿಗ್ರಹಗಳನ್ನು ತಯಾರಿಸಿದ್ದಾರೆ. 6 ಮತ್ತು 12 ಇಂಚು ಎತ್ತರದ ಸಣ್ಣ ವಿಗ್ರಹಗಳಿಗೆ ಕರ್ನಾಟಕದಿಂದ ಅನೇಕ ಬೇಡಿಕೆಗಳು ಬಂದಿವೆ. ಹೀಗಾಗಿ ಸಂಘಟಕರು ಅವರ ಬೃಹತ್ ಪ್ರತಿಮೆ ಮಾಡಿದ್ದು ಸ್ಥಳೀಯ ಶಾಸಕ ಅನ್ನಬತ್ತುನಿ ಶಿವಕುಮಾರ್ ಅನಾವರಣಗೊಳಿಸಿದ್ದಾರೆ.

ಪುನೀತ್ ರಾಜ್​ಕುಮಾರ್​ ಫೈಬರ್ ಪ್ರತಿಮೆಯನ್ನು ನಿರ್ಮಿಸಿದ ತೆನಾಲಿ ಶಿಲ್ಪಿಗಳು

ಈ ಪ್ರತಿಮೆಯನ್ನು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ಸೂರ್ಯ ಶಿಲ್ಪ ಸಂಸ್ಥೆಯ ವ್ಯವಸ್ಥಾಪಕ ಕಾಟೂರಿ ರವಿಚಂದ್ರ ತಿಳಿಸಿದರು. ಮುಖಭಾವ ಮತ್ತು ದೇಹದ ರಚನೆಯಲ್ಲಿ ವ್ಯತ್ಯಾಸವಾಗದಂತೆ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಆಧುನಿಕ ತಂತ್ರಜ್ಞಾನ ಬಳಸಿ ವಿಗ್ರಹಗಳನ್ನು ತಯಾರಿಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಬಳ್ಳಾರಿ: ಕೃಷ್ಣ ಶಿಲೆಯಲ್ಲಿ ನಿರ್ಮಿಸಿದ ಅಪ್ಪು ಪ್ರತಿಮೆ ಅನಾವರಣ

Last Updated : Oct 27, 2022, 10:35 PM IST

ABOUT THE AUTHOR

...view details