ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಹಿಟ್ ಅಂಡ್ ರನ್ ಪ್ರಕರಣವೊಂದು ನಡೆದಿದೆ. ಇದರಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಕೇಶವಪುರಂ ಪ್ರದೇಶದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಐವರು ಸ್ಕೂಟಿಯಲ್ಲಿ ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಲ್ಲಿ ಓರ್ವ ಯುವಕ ಗಾಯಗೊಂಡಿದ್ದು, ಮತ್ತೊಬ್ಬನನ್ನು ಕಾರಿನ ಸವಾರ 350 ಮೀಟರ್ವರೆಗೆ ಎಳೆದೊಯ್ದಿದ್ದಾನೆ. ಅಲರ್ಟ್ ಆದ ಕೇಶವಪುರಂ ಪೊಲೀಸ್ ಠಾಣೆಯ ಪಿಸಿಆರ್ ತಂಡ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿತ್ತು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದ. ಘಟನೆ ಕುರಿತು ಡಿಸಿಪಿ ಉಷಾ ರಂಗಣ್ಣಿ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿದ್ದ ಐವರು ಯುವಕರು ಕುಡಿದ ಅಮಲಿನಲ್ಲಿದ್ದರು ಎಂದು ಹೇಳಲಾಗುತ್ತಿದ್ದು, ಪೊಲೀಸರು ಎಲ್ಲರನ್ನೂ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ನರಹತ್ಯೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಡಿಸಿಪಿ ಹೇಳಿಕೆ ಪ್ರಕಾರ, ಗುರುವಾರ-ಶುಕ್ರವಾರದ ಮಧ್ಯರಾತ್ರಿ ಕೇಶವಪುರಂ ಪೊಲೀಸ್ ಠಾಣೆಯ ಎರಡು ಪಿಸಿಆರ್ ವ್ಯಾನ್‌ಗಳು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದವು. ಆಗ ಕನ್ಹಯ್ಯಾನಗರ ಪ್ರದೇಶದ ಪ್ರೇರಣಾ ಚೌಕ್‌ನಲ್ಲಿ ಟಾಟಾ ಜೆಸ್ಟ್ ಕಾರು ಆಕ್ಟಿವಾ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಇದನ್ನು ಪೊಲೀಸ್ ಸಿಬ್ಬಂದಿ ನೋಡಿದ್ದಾರೆ ಎಂದು ಹೇಳಿದರು.
ಈ ಸ್ಕೂಟಿಯಲ್ಲಿ ಇಬ್ಬರು ಯುವಕರು ಕುಳಿತಿದ್ದರು. ಡಿಕ್ಕಿ ರಭಸಕ್ಕೆ ಒಬ್ಬ ಯುವಕ ಗಾಳಿಯಲ್ಲಿ ಹಾರಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾನೆ. ಮತ್ತೊಬ್ಬ ಯುವಕ ಜಿಗಿದು ಕಾರಿನ ವಿಂಡ್‌ಸ್ಕ್ರೀನ್ ಮತ್ತು ಬಾನೆಟ್ ನಡುವೆ ಸಿಲುಕಿಕೊಂಡಿದ್ದನು. ಸ್ಕೂಟಿ ಕಾರಿನ ಬಂಪರ್‌ಗೆ ಸಿಲುಕಿಕೊಂಡಿದೆ. ಈ ಅಪಘಾತದ ನಂತರ, ಕಾರನ್ನು ನಿಲ್ಲಿಸುವ ಬದಲು ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು. ಆದರೆ ಪಿಸಿಆರ್‌ನಲ್ಲಿ ನಿಯೋಜಿಸಲಾದ ಪೊಲೀಸರು ಸುಮಾರು 350 ಮೀಟರ್‌ಗಳಷ್ಟು ಬೆನ್ನಟ್ಟಿ ಕಾರಿನಲ್ಲಿದ್ದ ಎಲ್ಲಾ ಐದು ಜನರನ್ನು ಹಿಡಿದಿದ್ದಾರೆ. ಆದ್ರೆ ಆರೋಪಿಗಳು ಈ ವೇಳೆ ಬೈಕ್ ಕಾರಿನಲ್ಲಿ ಸಿಲುಕಿಕೊಂಡಿದ್ದ ಬೈಕ್ ಸವಾರನನ್ನು ಎಳೆದೊಯ್ದಿದ್ದರು ಎಂದು ವಾಯುವ್ಯ ಜಿಲ್ಲೆಯ ಡಿಸಿಪಿ ಉಷಾ ರಂಗನಾನಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ವೈದ್ಯಕೀಯ ಪರೀಕ್ಷೆಯಲ್ಲಿ ಕಾರಿನಲ್ಲಿದ್ದವರೆಲ್ಲರೂ ಮದ್ಯದ ಅಮಲಿನಲ್ಲಿದ್ದರು. ಘಟನೆ ನಡೆದಾಗ ಎಲ್ಲರೂ ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದರು. ಸ್ಕೂಟಿ ಸವಾರಿ ಯುವಕರನ್ನು ಕೈಲಾಶ್ ಭಟ್ನಾಗರ್ ಮತ್ತು ಸುಮಿತ್ ಖಾರಿ ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಕೈಲಾಶ್ ಭಟ್ನಾಗರ್ ನೋವಿನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಮತ್ತೊಬ್ಬ ಯುವಕ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾನೆ. ಪ್ರಸ್ತುತ, ಪೊಲೀಸರು 304A/338/279/34 ಅಡಿಯಲ್ಲಿ ಅಪರಾಧಿ ನರಹತ್ಯೆಗಾಗಿ ಕಲಂ 304 ರ ಹೊರತಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು. ಈ ಘಟನೆ ಕುರಿತು ಕೇಶವಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ:ಮಧ್ಯಪ್ರದೇಶದಲ್ಲಿ ಸುಖೋಯ್-30, ಮಿರಾಜ್-2000 ಯುದ್ಧ ವಿಮಾನಗಳು ಪತನ..