ಚೆನ್ನೈ(ತಮಿಳುನಾಡು): ಬಿಜೆಪಿಯ ಮಹಿಳಾ ನಾಯಕಿಯರ ಕುರಿತಾಗಿ ಪಕ್ಷದ ಪದಾಧಿಕಾರಿಯೊಬ್ಬರು ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆ ಡಿಎಂಕೆ ಹಿರಿಯ ನಾಯಕಿ ಕನಿಮೊಳಿ ಶುಕ್ರವಾರ ಕ್ಷಮೆಯಾಚಿಸಿದ್ದಾರೆ.
ಸಾದಿಕ್ ಹೇಳಿಕೆಗೆ ಕ್ಷೇಮೆ:ಟ್ವಿಟರ್‌ನಲ್ಲಿ, 'ಮಹಿಳೆ ಮತ್ತು ಮನುಷ್ಯ' ಎಂದು ಬರೆದು ಕ್ಷಮೆಯಾಚಿಸಿರುವ ಅವರು, 'ತಮ್ಮ ನಾಯಕ ಎಂಕೆ ಸ್ಟಾಲಿನ್ ಆಗಲಿ ,ಅವರ ಪಕ್ಷವು ಅಂತಹ ನಡವಳಿಕೆಯನ್ನು ಸಹಿಸುವುದಿಲ್ಲ ಎಂಬ ಕಾರಣಕ್ಕಾಗಿ ಬಹಿರಂಗವಾಗಿ ನಾನು ಕ್ಷೇಮೆಯಾಚಿಸುದ್ದೇನೆ. ಇತ್ತೀಚೆಗೆ ಬಿಜೆಪಿ ನಾಯಕಿ ಮತ್ತು ನಟಿ ಖುಷ್ಬು ಸುಂದರ್ ಅವರನ್ನು ಡಿಎಂಕೆ ವಕ್ತಾರ ಸೈದಾಯಿ ಸಾದಿಕ್ ಅವರು ಅವಮಾನಿಸಿದ್ದಾರೆ ಎಂಬ ಟ್ವೀಟ್‌ಗೆ ಕ್ಷಮೆಯಾಚಿಸಿ ಈ ರೀತಿ ಪ್ರತಿಕ್ರಿಯೆಸಿದ್ದಾರೆ.
ಬಿಜೆಪಿ ನಾಯಕಿ ಖಷ್ಬು ಟ್ವೀಟ್ :ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್ ಅವರ ದ್ರಾವಿಡ ಮಾದರಿ ಪ್ರಶ್ನಿಸಿದ ಖುಷ್ಬು ಸುಂದರ್ ಅವರು, ತಮ್ಮ ಟ್ವೀಟ್‌ನಲ್ಲಿ, “ಪುರುಷರು ಮಹಿಳೆಯರನ್ನು ನಿಂದಿಸಿದಾಗ, ಅವರದ್ದು ಯಾವ ರೀತಿ ಪಾಲನೆ, ಪ್ರತಿಕ್ರಿಯೆ ಇರುತ್ತದೆ. ಅವರು ಬೆಳೆಸುವ ವಿಷಕಾರ ವಾತಾವರಣವನ್ನೂ ಪ್ರತಿನಿಧಿಸುವಂತಿದೆ. ಪುರುಷರು ಮಹಿಳೆಯ ಗರ್ಭವನ್ನು ಅವಮಾನಿಸುತ್ತಾರೆ ಅಂದರೆ ಅಂಥ ಪುರುಷರು ಅವರನ್ನು #Kalaignar ಅನುಯಾಯಿಗಳು ಎನ್ನುತ್ತಾರೆ. ಇದು Hable CM @mkstalin ಆಡಳಿತದ ದ್ರಾವಿಡ ಮಾದರಿಯೇ?" ಈ ಟ್ವೀಟ್ ನಲ್ಲಿ ಕನಿಮೊಳಿ ಅವರನ್ನೂ ಟ್ಯಾಗ್ ಮಾಡಲಾಗಿತ್ತು.
ಸ್ಟಾಲಿನ್ ಪ್ರತಿಕ್ರಿಯೆ:ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಎಂಕೆ ನಾಯಕ, " ಯಾರೇ ಏನೇ ಹೇಳಿದರೂ, ನಾನು ಮಹಿಳೆ ಮತ್ತು ಮನುಷ್ಯನಾಗಿ ಕ್ಷಮೆಯಾಚಿಸುತ್ತೇನೆ. ಇದನ್ನು ಯಾರೇ ಮಾಡಿದರೂ, ಪಕ್ಷವೂ ಮತ್ತು ನಾನಾಗಲಿ ಇಂಥ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.. ಇದಕ್ಕಾಗಿ ಬಹಿರಂಗವಾಗಿ ನಾನು ಕ್ಷೇಮೆಯಾಚಿಸಬೇಕಾಯಿತು. ಏಕೆಂದರೆ ನನ್ನ ನಾಯಕ @mkstalin ಮತ್ತು ನನ್ನ ಪಕ್ಷ @arivalayam ಇದನ್ನು ಕ್ಷಮಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.