ಕರ್ನಾಟಕ

karnataka

ETV Bharat / bharat

ಕನ್ಹಯ್ಯಾಲಾಲ್ ಕೊಲೆ ಪ್ರಕರಣಕ್ಕೆ ಭರ್ತಿ ವರ್ಷ: ಹಂತಕರಿಗೆ ಶೀಘ್ರ ಶಿಕ್ಷೆ ಪ್ರಕಟಿಸುವಂತೆ ಸಿಎಂ ಗೆಹ್ಲೋಟ್ ಒತ್ತಾಯ

ಕನ್ಹಯ್ಯಾಲಾಲ್ ಕೊಲೆಕೈದ ಹಂತಕರನ್ನು ಶೀಘ್ರವಾಗಿ ಶಿಕ್ಷಿಸಬೇಕೆಂದು ಗೃಹ ಸಚಿವ ಅಮಿತ್ ಶಾ ಅವರನ್ನು ಸಿಎಂ ಗೆಹ್ಲೋಟ್ ಒತ್ತಾಯಿಸಿದ್ದಾರೆ.

By

Published : Jun 29, 2023, 2:32 PM IST

Kanhaiyalal's killers should be punished soon: Gehlot to Shah
Kanhaiyalal's killers should be punished soon: Gehlot to Shah

ಜೈಪುರ (ರಾಜಸ್ಥಾನ):ಟೈಲರ್​ ಕನ್ಹಯ್ಯಾಲಾಲ್ ಕೊಲೆ ಮಾಡಿದ ಹಂತಕರನ್ನು ಶೀಘ್ರ ಶಿಕ್ಷಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ. ಅಮಿತ್ ಶಾ ಜೂನ್ 30 ರಂದು ಉದಯಪುರ ಪ್ರವಾಸ ಕೈಗೊಂಡಿದ್ದು, ಅದಕ್ಕೂ ಮುನ್ನ ಸಿಎಂ ಗೆಹ್ಲೋಟ್ ಈ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ.

ಕೊಲೆ ನಡೆದು ಜೂನ್ 28ಕ್ಕೆ ವರ್ಷ ತುಂಬಿದ್ದು ಇನ್ನೂ ಹಂತಕರ ಶಿಕ್ಷೆಯಾಗದಿರುವುಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಟೈಲರ್ ಆಗಿದ್ದ ಕನ್ಹಯ್ಯಾಲಾಲ್ ಅವರನ್ನು ಒಂದು ವರ್ಷದ ಹಿಂದೆ ಉದಯಪುರದಲ್ಲಿ ಹಂತಕರ ತಂಡವೊಂದು ಶಿರಚ್ಛೇದನ ಮಾಡಿ ಪರಾರಿಯಾಗಿತ್ತು. ಈ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಅಮಿತ್ ಶಾ ಭೇಟಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಜೂನ್ 30 ರಂದು ಉದಯಪುರಕ್ಕೆ ಆಗಮಿಸಲಿದ್ದಾರೆ. ಕೊಲೆ ನಡೆದು ಜೂನ್ 28ಕ್ಕೆ ವರ್ಷ ತುಂಬಿದ್ದು ಶಾ ಭೇಟಿಗೂ ಮುನ್ನ ಸ್ಥಳೀಯ ಬಿಜೆಪಿ ನಾಯಕರು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಗೆಹ್ಲೋಟ್ ನೃತೃತ್ವದ ಸರ್ಕಾರ ವಿರುದ್ಧ ಸಿಡಿದೇಳುವ ಸಾಧ್ಯತೆ ಇದೆ. ಪ್ರಕರಣ ಮತ್ತೆ ರಾಜಕೀಯ ಸ್ವರೂಪ ಪಡೆದುಕೊಳ್ಳುವುದಕ್ಕೂ ಮುನ್ನ ಕನ್ಹಯ್ಯಾಲಾಲ್ ಹಂತಕರನ್ನು ಶೀಘ್ರ ಶಿಕ್ಷಿಸುವಂತೆ ಮುಖ್ಯಮಂತ್ರಿ ಗೆಹ್ಲೋಟ್ ಅವರು ಕೇಂದ್ರ ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ. ಸ್ಪಷ್ಟ ಸಾಕ್ಷ್ಯಗಳು ಲಭ್ಯವಾಗಿವೆ. ಪ್ರಕರಣದಲ್ಲಿ ವರ್ಷ ಕಳೆದರೂ ಆರೋಪಿಗಳಿಗೆ ಶಿಕ್ಷೆಯಾಗದಿರುವುದು ಬೇಸರ ತಂದಿದೆ. ಹಾಗಾಗಿ ಕನ್ಹಯ್ಯಾಲಾಲ್ ಕೊಲೆಕೈದ ಹಂತಕರನ್ನು ಶೀಘ್ರವಾಗಿ ಶಿಕ್ಷಿಸಬೇಕೆಂದು ಶಾ ಅವರನ್ನು ಗೆಹ್ಲೋಟ್ ಒತ್ತಾಯಿಸಿದ್ದಾರೆ.

ವರ್ಷ ಕಳೆದರೂ ಶಿಕ್ಷೆ ಆಗಿಲ್ಲ:ಹಲವು ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ತ್ವರಿತ ವಿಚಾರಣೆ ನಡೆಸುತ್ತಿದೆ. ಅಲ್ಲದೇ ತಿಂಗಳೊಳಗೆ ಆರೋಪಿಗಳನ್ನು ನ್ಯಾಯಾಲಯದ ಮೂಲಕ ಗಲ್ಲಿಗೇರಿಸುವಂತಹ ಕಠಿಣ ಶಿಕ್ಷೆಯನ್ನು ಘೋಷಿಸಿದೆ. ಆದರೂ ಈ ಪ್ರಕರಣದಲ್ಲಿ ಇನ್ನೂ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ ಅನ್ನೋದು ಬೇಸರದ ಸಂಗತಿ. ಈ ಭೀಕರ ಹತ್ಯೆ ಬಳಿಕ ರಾಜಸ್ಥಾನ ಪೊಲೀಸರು ತ್ವರಿತ ಕ್ರಮ ಕೈಗೊಂಡು 4 ಗಂಟೆಗಳಲ್ಲಿ ಆರೋಪಿಗಳಿಬ್ಬರನ್ನೂ ಬಂಧಿಸಿ ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ. ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಕೈವಾಡ ಇರುವ ಸಂಶಯದ ಹಿನ್ನೆಲೆ ಕೇಂದ್ರ ಸರ್ಕಾರದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅದೇ ರಾತ್ರಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.

ಈ ಅಪರಾಧಿಗಳ ಬಂಧನದ ನಂತರ ರಾಜಸ್ಥಾನ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದರು. ರಾಜ್ಯ ಸರ್ಕಾರಿ ಸಂಸ್ಥೆಗಳು ಎನ್‌ಐಎಗೆ ಸಂಪೂರ್ಣ ಸಹಕಾರ ನೀಡಿವೆ. ಎನ್‌ಐಎ ದೇಶದ ಪ್ರಮುಖ ಸಂಸ್ಥೆಯಾಗಿದ್ದು, ಆದಷ್ಟು ಬೇಗ ಶಿಕ್ಷೆಯಾಗುವಂತೆ ಗೃಹ ಸಚಿವ ಅಮಿತ್ ಶಾ ಎನ್‌ಐಎಗೆ ನಿರ್ದೇಶನ ನೀಡಬೇಕು ಎಂದು ಅಶೋಕ್ ಗೆಹ್ಲೋಟ್ ಮನವಿ ಮಾಡಿಕೊಂಡಿದ್ದಾರೆ.

ಜಾಲತಾಣದಲ್ಲಿ ವೈರಲ್:ಟೈಲರ್​ ಕನ್ಹಯ್ಯಾ ಲಾಲ್​ ಅವರನ್ನು ರಿಯಾಜ್​ ಅಖ್ತಾರಿ ಮತ್ತು ಮೊಹಮ್ಮದ್​ ಎಂಬುವರು ಕತ್ತು ಸೀಳಿ ಕೊಲೆ ಮಾಡಿದ್ದರು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಮಾಡಿದ್ದರು. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದ ಪೊಲೀಸರು, ಕೃತ್ಯ ನಡೆದ ಎರಡು ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ್ದರು. ಇದರ ಬೆನ್ನಲ್ಲೇ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ಇದುವರೆಗೂ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿಲ್ಲ.

ಸರ್ಕಾರಿ ನೌಕರಿ:ಕನ್ಹಯ್ಯಾಲಾಲ್​ ಕೊಲೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಕೂಡ​ ಸಲ್ಲಿಸಿದೆ. ಇದರಲ್ಲಿ ಇಬ್ಬರು ಪಾಕಿಸ್ತಾನಿಯರು ಸೇರಿ 9 ಮಂದಿ ವಿರುದ್ಧ ಆರೋಪಿಸಿದೆ. ಇನ್ನು ಹತ್ಯೆಗೀಡಾದ ಕನ್ಹಯ್ಯಲಾಲ್ ಅವರ ಇಬ್ಬರು ಪುತ್ರರಿಗೆ ರಾಜಸ್ಥಾನ ಸರ್ಕಾರ ಸರ್ಕಾರಿ ನೌಕರಿ ನೀಡಿದೆ.

ಇದನ್ನೂ ಓದಿ:ಕನ್ಹಯ್ಯಾಲಾಲ್​ ಹತ್ಯೆಯಲ್ಲಿ ಪಾಕಿಸ್ತಾನ ಕೈವಾಡ ದೃಢ..ಎನ್​ಐಎ ಚಾರ್ಜ್​ಶೀಟ್​ನಲ್ಲಿ ಆರೋಪ

ABOUT THE AUTHOR

...view details