ಕರ್ನಾಟಕ

karnataka

ETV Bharat / bharat

ಗಾಂಧಿ ಜಯಂತಿಯಂದು ಕನ್ಹಯ್ಯ ಕುಮಾರ್​, ಜಿಗ್ನೇಶ್​ ಮೇವಾನಿ ಕಾಂಗ್ರೆಸ್​ ಸೇರ್ಪಡೆ? - ಕನ್ಹಯ್ಯ ಕುಮಾರ್​ ಕಾಂಗ್ರೆಸ್​

ದಲಿತ ಸಮುದಾಯದ ಮುಖಂಡರಾಗಿರುವ ಕನ್ಹಯ್ಯ ಕುಮಾರ್ ಹಾಗೂ ಜಿಗ್ನೇಶ್​ ಮೇವಾನಿ ಅವರನ್ನು ಸೆಳೆದಿರುವ ಕಾಂಗ್ರೆಸ್​​ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಹೂರ್ತ ನಿಗದಿ ಮಾಡಿದೆ.

Kanhaiya kumar, Jignesh mevani
Kanhaiya kumar, Jignesh mevani

By

Published : Sep 20, 2021, 6:40 PM IST

ನವದೆಹಲಿ:ಜೆಎನ್​ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಭಾರತೀಯ ಕಮ್ಯುನಿಸ್ಟ್​​​ ಪಕ್ಷದ(ಸಿಪಿಐ) ಮುಖಂಡ ಕನ್ಹಯ್ಯ ಕುಮಾರ್​ ಹಾಗೂ ಗುಜರಾತ್​ನ ಶಾಸಕ ಜಿಗ್ನೇಶ್​ ಮೇವಾನಿ ಕಾಂಗ್ರೆಸ್​ ಪಕ್ಷ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಅಕ್ಟೋಬರ್​​​ 2ರಂದು 'ಕೈ' ಪಕ್ಷ ಸೇರಿಕೊಳ್ಳಲಿದ್ದಾರೆ.

ಇಬ್ಬರು ಮುಖಂಡರು ಸೆಪ್ಟೆಂಬರ್​ 28ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಬೇಕಾಗಿತ್ತು. ಆದರೆ ಕಾರ್ಯಕ್ರಮ ಮುಂದೂಡಿಕೆಯಾಗಿದ್ದು, ಅಕ್ಟೋಬರ್​​ 2ರಂದು(ಗಾಂಧಿ ಜಯಂತಿ) ನವದೆಹಲಿಯಲ್ಲಿ ಕೆಲ ಹಿರಿಯ ಮುಖಂಡರ ಸಮ್ಮುಖದಲ್ಲಿ ಪಕ್ಷ​​ ಸೇರಲಿದ್ದಾರೆಂದು ವರದಿಯಾಗಿದೆ.

ಗುಜರಾತ್​​ನ ದಲಿತ ಮುಖಂಡನಾಗಿರುವ ಮೇವಾನಿ ವಡ್ಗಮ್​​ ಕ್ಷೇತ್ರದಿಂದ ಗೆಲುವು ಸಾಧಿಸಿದ್ದು, ಇದೀಗ ಕಾಂಗ್ರೆಸ್​​ ಸೇರ್ಪಡೆಯಾಗಿ ಗುಜರಾತ್​ ಕಾಂಗ್ರೆಸ್​​​ ರಾಜ್ಯ ಘಟಕದ ಕಾರ್ಯಧ್ಯಕ್ಷ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಗುಜರಾತ್​ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ದಲಿತ ವೋಟ್​ ಬ್ಯಾಂಕ್ ಪಡೆಯುವ ಉದ್ದೇಶದಿಂದ ಪಕ್ಷ​​ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಜವಾಹರ್​ಲಾಲ್​ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಿಪಿಎಂ ಸೇರಿಕೊಂಡಿದ್ದ ಕನ್ಹಯ್ಯ ಕುಮಾರ್​ ಕಾಂಗ್ರೆಸ್​ ಸೇರಿಕೊಂಡರೆ, ಬಿಹಾರದಲ್ಲಿ ಪಕ್ಷದ ಬಲ ವೃದ್ಧಿಸಲಿದೆ ಅನ್ನೋದು ಕಾಂಗ್ರೆಸ್‌ ಲೆಕ್ಕಾಚಾರ.

ಇದನ್ನೂ ಓದಿ:ವಿದ್ಯುತ್, ನೀರು ಬಾಕಿ ಸಂಪೂರ್ಣ ಮನ್ನಾ ಮಾಡಿ ನಾನೇ 'ಆಮ್ ಆದ್ಮಿ' ಎಂದ ಚನ್ನಿ: ಅಮರೀಂದರ್ ಸಿಂಗ್‌ ಆಪ್ತ ಅಧಿಕಾರಿಗಳಿಗೂ ಗೇಟ್‌ಪಾಸ್‌!

ಚುನಾವಣೆ ದೃಷ್ಟಿಯಿಂದ ಯುವಕರಿಗೆ ಮಣೆ

2022ರಲ್ಲಿ ಗುಜರಾತ್​, ಪಂಜಾಬ್​, ಉತ್ತರಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ನಡೆಯಲಿದೆ. ಇದಾದ ಬಳಿಕ 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್​ ಯುವಕರಿಗೆ ಮಣೆ ಹಾಕುತ್ತಿದೆ. ಕನ್ಹಯ್ಯ ಕುಮಾರ್​ ಈಗಾಗಲೇ ರಾಹುಲ್​ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನ ಭೇಟಿ ಮಾಡಿ ಮಾತುಕತೆ ಸಹ ನಡೆಸಿದ್ದಾಗಿಯೂ ತಿಳಿದು ಬಂದಿದೆ. ​

ABOUT THE AUTHOR

...view details