ಜಲ್ಪೈಗುರಿ (ಪಶ್ಚಿಮ ಬಂಗಾಳ): ಆಸ್ಟ್ರೇಲಿಯಾದಲ್ಲಿ ಕಂಡುಬರುವ ಕಾಂಗರೂಗಳು, ಭಾರತದಲ್ಲೂ ಕಾಣಿಸಿಕೊಂಡಿವೆ. ಆದ್ರೆ ಅಧಿಕೃತವಾಗಿ ಅಥವಾ ಪ್ರಾಣಿ ವಿನಿಮಯ ಪ್ರಕ್ರಿಯೆಯಿಂದ ಇವು ಬಂದಿರಬಹದು ಅಂದುಕೊಂಡ್ರೆ ನಿಮ್ಮ ಊಹೆ ತಪ್ಪಾಗುತ್ತೆ. ಉತ್ತರ ಬಂಗಾಳದ ಜಲ್ಪೈಗುರಿ ಮತ್ತು ಸಿಲಿಗುರಿಯಿಂದ ಒಂದು ತಿಂಗಳ ಅವಧಿಯಲ್ಲಿ ಇದುವರೆಗೆ ಐದು ಕಾಂಗರೂಗಳನ್ನು ರಕ್ಷಿಸಲಾಗಿದೆ. ಆದರೆ ಈ ಕಾಂಗರೂಗಳು ಎಲ್ಲಿಂದ ಬರುತ್ತಿವೆ ಎಂಬುದು ಈಗ ಉದ್ಭವಿಸಿರುವ ಪ್ರಶ್ನೆಯಾಗಿದೆ.
ಅಲಿಪುರ್ದೌರ್ ಜಿಲ್ಲೆಯ ಅಸ್ಸೋಂ-ಬಾಂಗ್ಲಾ ಗಡಿ ಪ್ರದೇಶದ ಬರೋಬಿಶಾದಲ್ಲಿ ವಯಸ್ಕ ಕಾಂಗರೂಗಳು ಪತ್ತೆಯಾಗಿವೆ. ಹಾಗೆ ಇಬ್ಬರು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ಈ ಕುರಿತು ರಾಜ್ಯ ಅರಣ್ಯ ಇಲಾಖೆ ಈಗಾಗಲೇ ಉನ್ನತ ಮಟ್ಟದ ತನಿಖೆ ಆರಂಭಿಸಿದೆ. ಜಲ್ಪೈಗುರಿ ಸೈನ್ಸ್ ಮತ್ತು ನೇಚರ್ ಕ್ಲಬ್ ಕಾರ್ಯದರ್ಶಿ ರಾಜಾ ರಾವುತ್ ಪ್ರತಿಕ್ರಿಯೆ ನೀಡಿ, ಕಾಂಗರೂಗಳ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಬಗ್ಗೆ ತಿಳಿದುಬಂದಿದೆ ಎಂದಿದ್ದಾರೆ.