ಕರ್ನಾಟಕ

karnataka

ETV Bharat / bharat

Kangana's Freedom Comment: ಹೇಳಿಕೆ ತಪ್ಪೆಂದು ಸಾಬೀತಾದ್ರೆ ಕ್ಷಮೆಯಾಚಿಸುವೆ, ಪದ್ಮಶ್ರೀ ಹಿಂದಿರುಗಿಸುವೆ - ಕಂಗನಾ

ತಾವು ನೀಡಿದ ಸ್ವಾತಂತ್ರ್ಯದ ಕುರಿತ ಹೇಳಿಕೆ (freedom comment) ತಪ್ಪೆಂದು ಸಾಬೀತಾದರೆ ಕ್ಷಮೆಯಾಚಿಸುವುದಾಗಿ ಹಾಗೂ ಪ್ರತಿಷ್ಠಿತ ಪದ್ಮಶ್ರೀ (Padma Shri) ಪ್ರಶಸ್ತಿ ಹಿಂದಿರುಗಿಸುವುದಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ತಿಳಿಸಿದ್ದಾರೆ.

ಕಂಗನಾ
ಕಂಗನಾ

By

Published : Nov 13, 2021, 4:02 PM IST

ಹೈದರಾಬಾದ್: "ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ. 1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಅದು ಭಿಕ್ಷೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ಬಾಲಿವುಡ್ ನಟಿ-ನಿರ್ಮಾಪಕಿ ಕಂಗನಾ ರಣಾವತ್ (Bollywood actor-producer Kangana Ranaut) ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಾವು ನೀಡಿದ ಸ್ವಾತಂತ್ರ್ಯದ ಕುರಿತ ಹೇಳಿಕೆ (freedom comment) ತಪ್ಪೆಂದು ಸಾಬೀತಾದರೆ ಕ್ಷಮೆಯಾಚಿಸುವುದಾಗಿ ಹಾಗೂ ಪ್ರತಿಷ್ಠಿತ ಪದ್ಮಶ್ರೀ (Padma Shri) ಪ್ರಶಸ್ತಿ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ.

ಕಂಗನಾ ಇನ್‌ಸ್ಟಾಗ್ರಾಮ್ ಸ್ಟೋರಿ

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ (Kangana Instagram Story) ಪುಸ್ತಕವೊಂದರ ಆಯ್ದ ಭಾಗವನ್ನು ಹಂಚಿಕೊಂಡಿರುವ ನಟಿ, 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದ ಜೊತೆಗೆ ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ ಮತ್ತು ವೀರ ಸಾವರ್ಕರ್ ಅವರಂತಹ ಶ್ರೇಷ್ಠರ ತ್ಯಾಗವನ್ನು ಸಂದರ್ಶನದಲ್ಲಿ ಉಲ್ಲೇಖಿಸಲಾಗಿದೆ. 1857ರ ಸ್ವಾತಂತ್ರ್ಯ ಹೋರಾಟ ನನಗೆ ತಿಳಿದಿದೆ. 1947 ರಲ್ಲಿ ಯಾವ ಯುದ್ಧ ನಡೆಯಿತು ಎಂಬುದು ನನಗೆ ತಿಳಿದಿಲ್ಲ. ಯಾರಾದರೂ ನನ್ನ ಅರಿವಿಗೆ ತಂದರೆ ನಾನು ನನ್ನ ಪದ್ಮಶ್ರೀಯನ್ನು ಹಿಂದಿರುಗಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಇದಕ್ಕೆ ನನಗೆ ಸಹಾಯ ಮಾಡಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ: ವಿವಾದಾತ್ಮಕ ಹೇಳಿಕೆ ಮೂಲಕ ಟ್ರೋಲ್​ಗೆ ಗುರಿಯಾದ ಕಂಗನಾ ರಣಾವತ್

ಕಂಗನಾ ಹಂಚಿಕೊಂಡಿರುವ ಪುಸ್ತಕವೊಂದರ ಆಯ್ದ ಭಾಗದಲ್ಲಿ ಬಾಲಗಂಗಾಧರ ತಿಲಕ್​, ಅರವಿಂದ್​ ಘೋಷ್​, ಬಿಪಿನ್​ ಚಂದ್ರಪಾಲ್​ರಂತಹ ಕ್ರಾಂತಿಕಾರಿ ಹೋರಾಟಗಾರರು ಐಎನ್​ಸಿ (INC -Indian National Congress) ವಿರುದ್ಧ ನೀಡಿರುವ ಹೇಳಿಕೆಗಳು ಇವೆ.

ಕಂಗನಾ ರಣಾವತ್

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲು ಭಾರತ ಸಜ್ಜಾಗುತ್ತಿರುವಾಗ ನಟಿಯ ಈ ಹೇಳಿಕೆಯನ್ನು ಕಾಂಗ್ರೆಸ್, ಎಎಪಿ, ಶಿವಸೇನೆ, ಎನ್​ಸಿಪಿ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಖಂಡಿಸಿದ್ದು, ಕಂಗನಾಗೆ ನೀಡಿದ ಪ್ರಶಸ್ತಿಗಳನ್ನು ಹಿಂಪಡೆದುಕೊಳ್ಳುವಂತೆ ಒತ್ತಾಯಿಸುತ್ತಿವೆ. ಇದರ ಬೆನ್ನಲ್ಲೇ ಕಂಗನಾ ಇಂದು ಈ ಪೋಸ್ಟ್ ಮಾಡಿದ್ದಾರೆ.

ABOUT THE AUTHOR

...view details