ಕರ್ನಾಟಕ

karnataka

ETV Bharat / bharat

ಸಿಖ್ಖರ ವಿರುದ್ಧ ಅವಹೇಳನಕಾರಿ ಹೇಳಿಕೆ: ಮುಂಬೈ ಪೊಲೀಸರ ಮುಂದೆ ಹಾಜರಾಗದ ಕಂಗನಾ - ರೈತ ಪ್ರತಿಭಟನೆ ವೇಳೆ ಕಂಗನಾ ಹೇಳಿಕೆ

Kangana Ranaut case: ಕೃಷಿ ಕಾಯ್ದೆಗಳ ವಿರುದ್ಧ ರೈತ ಪ್ರತಿಭಟನೆ ವೇಳೆ ಸಿಖ್ಖರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಂಗನಾ ರಣಾವತ್ ಇಂದು ಮುಂಬೈ ಪೊಲೀಸರ ಮುಂದೆ ಹಾಜರಾಗಲ್ಲವೆಂದು ಅವರ ಪರ ವಕೀಲರು ಹೇಳಿದ್ದಾರೆ.

Kangana Ranaut not to appear before Mumbai Police today
ಸಿಖ್​ರ ವಿರುದ್ಧ ಅವಹೇಳನಕಾರಿ ಹೇಳಿಕೆ: ಮುಂಬೈ ಪೊಲೀಸರ ಮುಂದೆ ಹಾಜರಾಗದ ಕಂಗನಾ

By

Published : Dec 22, 2021, 9:46 AM IST

ಮುಂಬೈ(ಮಹಾರಾಷ್ಟ್ರ):ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈನ ಖಾರ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಬೇಕಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಬುಧವಾರ ಪೊಲೀಸರ ಮುಂದೆ ಹಾಜರಾಗುವುದಿಲ್ಲ ಎಂದು ಕಂಗನಾ ವಕೀಲ ರಿಜ್ವಾನ್ ಸಿದ್ದಿಕಿ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್​ನಲ್ಲಿ ಸಿಖ್​ರ ವಿರುದ್ಧದ ಪೋಸ್ಟ್‌ಗಾಗಿ ಅವರು ಬುಧವಾರ ಖಾರ್ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲು ಮಾಡಬೇಕಿತ್ತು. ಈ ಹಿಂದೆ ಇದೇ ವಿಚಾರದ ಕುರಿತಂತೆ ಡಿಸೆಂಬರ್ 13ರಂದು ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ಡಿಸೆಂಬರ್ 22ರಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚನೆ ನೀಡಿತ್ತು.

ಮುಂದಿನ ಹೈಕೋರ್ಟ್ ವಿಚಾರಣೆ ಜನವರಿ 25ರಂದು ನಡೆಯಲಿದ್ದು, ಅಲ್ಲಿವರೆಗೆ ಕಂಗನಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಬೆನ್ನಲ್ಲೇ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಂಗನಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಎಲ್ಲಾ ಪೋಸ್ಟ್​ಗಳನ್ನು ಸೆನ್ಸಾರ್ ಮಾಡಬೇಕೆಂದು ವಕೀಲ ಚರಂಜೀತ್ ಸಿಂಗ್ ಚಂದ್ರಪಾಲ್ ಎಂಬುವರು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದರೊಂದಿಗೆ ನಟಿಯ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಮುಂಬೈನ ಖಾರ್ ಪೊಲೀಸ್ ಠಾಣೆಗೆ ವರ್ಗಾಯಿಸಲು ನಿರ್ದೇಶನ ನೀಡಬೇಕೆಂದು ವಕೀಲ ಚರಂಜೀತ್ ಸಿಂಗ್ ಚಂದ್ರಪಾಲ್ ಹೈಕೋರ್ಟ್​ಗೆ ಮನವಿ ಮಾಡಿದ್ದರು.

ಇದನ್ನೂ ಓದಿ:ಹೈದರಾಬಾದ್​ಗೆ ಮರುನಾಮಕರಣ ಅಜೆಂಡಾ: ಟ್ವೀಟ್​​ನಲ್ಲಿ ಭಾಗ್ಯನಗರ ಎಂದು ಉಲ್ಲೇಖಿಸಿದ ಆರ್​ಎಸ್​ಎಸ್​

ABOUT THE AUTHOR

...view details