ಕರ್ನಾಟಕ

karnataka

ETV Bharat / bharat

'ಪಾಪ ಕೃತ್ಯಗಳು ಹೆಚ್ಚಾದಾಗ ಸಂಹಾರ, ಹರಹರ ಮಹದೇವ್..': ಉದ್ಧವ್ ವಿರುದ್ಧ ಕಂಗನಾ ಆಕ್ರೋಶ - ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಆಕ್ರೋಶ

ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡುತ್ತಿದ್ದಂತೆ ಬಾಲಿವುಡ್ ನಟಿ ಕಂಗನಾ ರಣಾವತ್​ ವಿಶೇಷ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ.

kangana ranaut attack on uddhav thackeray
kangana ranaut attack on uddhav thackeray

By

Published : Jun 30, 2022, 3:41 PM IST

ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ನಿನ್ನೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್​, ತನ್ನ ವಿರುದ್ಧ ಈ ಹಿಂದೆ ಅಘಾಡಿ ಸರ್ಕಾರ ತೆೆಗದುಕೊಂಡ ಕ್ರಮಗಳನ್ನು ಸ್ಮರಿಸಿ ಟೀಕಾ ಪ್ರಹಾರ ನಡೆಸಿದ್ದಾರೆ.

ಇನ್​​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, "ಪಾಪ ಹೆಚ್ಚಾದಾಗ ಸಂಹಾರವಾಗುತ್ತದೆ, ಶಿವಸೇನೆಯೇ ಹನುಮಾನ್​ ಚಾಲೀಸಾ​​ ನಿಷೇಧಿಸಿತ್ತು. ಇದೀಗ ಶಿವ ಕೂಡಾ ಅವರನ್ನು ಕಾಪಾಡಲಿಲ್ಲ. ಹರಹರ ಮಹದೇವ್. ಅಧಿಕಾರದ ಅಹಂಕಾರದಲ್ಲಿ ಮೆರೆದರೆ ಅಂಥವರ ಪ್ರತಿಷ್ಠೆ ನುಚ್ಚುನೂರಾಗುತ್ತದೆ ಎಂದು ನಾನು 2020ರಲ್ಲೇ ಹೇಳಿದ್ದೆ. ಇದೀಗ ಅದು ನಿಜವಾಗಿದೆ. ಪ್ರಜಾಪ್ರಭುತ್ವ ಎಂಬುದು ಒಂದು ವಿಶ್ವಾಸ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರಕ್ಕೆ ಸಿಎಂ ಫಡ್ನವೀಸ್​​, ಡೆಪ್ಯೂಟಿ ಸಿಎಂ​ ಶಿಂಧೆ: ವರದಿ

ಠಾಕ್ರೆ ವಿರುದ್ಧ ಯಾಕೆ ಕೋಪ?: 2020ರಲ್ಲಿ ಕಂಗನಾ ರಣಾವತ್​ ಅವರ ನಿವಾಸವನ್ನು ಉದ್ಧವ್ ಠಾಕ್ರೆ ಸರ್ಕಾರ ತೆರವುಗೊಳಿಸಿತ್ತು. ಅಕ್ರಮ ಹಾಗೂ ಕಾನೂನುಬಾಹಿರವಾಗಿ ಮನೆ ನಿರ್ಮಾಣ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಆ ಸಂದರ್ಭದಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದ ಕಂಗನಾ, ನಿಮ್ಮ ಗರ್ವ ಮುರಿದುಹೋಗಲಿದೆ ಎಂದು ಕೋಪಗೊಂಡಿದ್ದರು.

ABOUT THE AUTHOR

...view details