ಕರ್ನಾಟಕ

karnataka

ETV Bharat / bharat

ಒಂದು ಕೆನ್ನೆಗೆ ಹೊಡೆದರೆ..: ಮತ್ತೆ ವಿವಾದದಲ್ಲಿ ಕಂಗನಾ ರಣಾವತ್ - ಕಂಗನಾ ರಣಾವತ್ ಮತ್ತೆ ವಿವಾದದಲ್ಲಿ

ಇನ್​​​ಸ್ಟಾಗ್ರಾಂ ಸ್ಟೋರಿಯಲ್ಲಿ ಹೋರಾಡಿ ಸ್ವಾತಂತ್ರ್ಯ ಪಡೆಯುವ ಧೈರ್ಯವಿಲ್ಲದವರಿಗೆ ಹಾಗೂ ಅಧಿಕಾರ ದಾಹ ಮತ್ತು ಕುತಂತ್ರಿಗಳಿಗೆ ಬ್ರಿಟೀಷರಿಗೆ ಸ್ವಾತಂತ್ರವನ್ನು ಹಸ್ತಾಂತರ ಮಾಡಿದ್ದಾರೆ ಎಂದು ಕಂಗನಾ ಬರೆದುಕೊಂಡಿದ್ದಾರೆ.

Kangana now targets Mahatma Gandhi, says 'offering another cheek' gets 'bheek' not freedom
ಒಂದು ಕೆನ್ನೆಗೆ ಹೊಡೆದರೆ..: ಮತ್ತೆ ವಿವಾದದಲ್ಲಿ ಕಂಗನಾ ರಣಾವತ್

By

Published : Nov 17, 2021, 2:24 PM IST

ಮುಂಬೈ:ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಇತ್ತೀಚೆಗೆ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ 1947ರಲ್ಲಿ ಭಾರತಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ ಎಂದು ಹೇಳಿ ವಿವಾದಕ್ಕೀಡಾಗಿದ್ದ ಅವರು ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮದ ವಿಚಾರನ್ನೇ ಇಟ್ಟುಕೊಂಡು ಸ್ವತಃ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಹಳೆಯ ಸುದ್ದಿಪತ್ರಿಕೆಯೊಂದರ ತುಣುಕನ್ನು ಪೋಸ್ಟ್ ಮಾಡಿರುವ ಅವರು 'ನೀವು ಗಾಂಧಿ ಅಭಿಮಾನಿ ಅಥವಾ ನೇತಾಜಿ ಅವರ ಬೆಂಬಲಿಗರಾಗಿರಬಹುದು. ಆದರೆ, ಅವರಿಬ್ಬರೂ ಆಗಿರಲು ಸಾಧ್ಯವಿಲ್ಲ. ನೀವೇ ಆಯ್ಕೆ ಮಾಡಿಕೊಂಡು ನಿರ್ಧರಿಸಿ ಎಂದಿದ್ದಾರೆ.

ಕಂಗನಾ ಪೋಸ್ಟ್ ಮಾಡಿದ ಪತ್ರಿಕೆಯ ತುಣುಕು

ಕಂಗನಾ ಪೋಸ್ಟ್ ಮಾಡಿರುವುದು 1940ರ ಸುದ್ದಿ ಪತ್ರಿಕೆಯ ತುಣುಕಾಗಿದ್ದು, 'ಗಾಂಧಿ ಮತ್ತು ಇತರರು ನೇತಾಜಿಗೆ ಒಪ್ಪಿಸಲು ಒಪ್ಪಿಕೊಂಡರು' ('Gandhi, others had agreed to hand over Netaji') ಎಂಬ ತಲೆ ಬರಹವನ್ನು ಹೊಂದಿದೆ.

ಕಂಗನಾ ರಣಾವತ್ ಪೋಸ್ಟ್

ಮತ್ತೊಂದು ಇನ್​​​ಸ್ಟಾಗ್ರಾಂ ಸ್ಟೋರಿಯಲ್ಲಿ ಹೋರಾಡಿ ಸ್ವಾತಂತ್ರ್ಯ ಪಡೆಯುವ ಧೈರ್ಯವಿಲ್ಲದವರಿಗೆ ಹಾಗೂ ಅಧಿಕಾರ ದಾಹ ಮತ್ತು ಕುತಂತ್ರಿಗಳಿಗೆ ಬ್ರಿಟೀಷರಿಗೆ ಸ್ವಾತಂತ್ರವನ್ನು ಹಸ್ತಾಂತರ ಮಾಡಿದ್ದಾರೆ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಕಂಗನಾ ರಣಾವತ್ ಪೋಸ್ಟ್

ಯಾರಾದರೂ ಒಂದು ಕೆನ್ನೆಗೆ ಹೊಡೆದರೆ, ಮತ್ತೊಂದು ಕೆನ್ನೆ ಕೊಡಿ, ಸ್ವಾತಂತ್ರ್ಯ ಸಿಗುತ್ತದೆ ಎನ್ನಲಾಗುತ್ತಿತ್ತು. ಹಾಗೆ ಮಾಡಿದರೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ ಮಾತ್ರ. ನಿಮ್ಮ ವೀರರನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳಿ ಎಂದು ಕಂಗನಾ ಪರೋಕ್ಷವಾಗಿ ಮಹಾತ್ಮ ಗಾಂಧಿ ಅವರ ತತ್ತ್ವಗಳ ವಿರುದ್ಧ ಆಕ್ರೋಶ (Kangana targets Mahatma Gandhi) ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕಂಗನಾ, ಭಗತ್ ಸಿಂಗ್ ಅಥವಾ ಸುಭಾಷ್ ಚಂದ್ರ ಬೋಸ್ ಅವರನ್ನು ಎಂದೂ ಬೆಂಬಲಿಸಿರಲಿಲ್ಲ ಎಂದೂ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:Tamil Nadu..ಮುಂದುವರಿದ ವರುಣಾರ್ಭಟ: ಚೆನ್ನೈ ಸೇರಿ ನೆರೆಯ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ABOUT THE AUTHOR

...view details