ಕಾಂಚೀಪುರಂ(ತಮಿಳುನಾಡು):ಮಗನ ಮೇಲಿನ ಪ್ರೀತಿಗೋಸ್ಕರ ಪೋಷಕರು ಪ್ರತಿಮೆ ನಿರ್ಮಿಸಿ ಪುತ್ರ ಪ್ರೇಮ ಮೆರೆದಿರುವ ಘಟನೆ ಕಾಂಚೀಪುರದಲ್ಲಿ ಬೆಳಕಿಗೆ ಬಂದಿದೆ. 80 ವರ್ಷದ ನಿವೃತ್ತ ಶಿಕ್ಷಕ ಕರುಣಾಕರನ್ ಮತ್ತು ಅವರ ಪತ್ನಿ ಹಾಗೂ ನಿವೃತ್ತ ಜಿಲ್ಲಾ ಕಂದಾಯ ಅಧಿಕಾರಿಯಾಗಿರುವ ಶಿವಗಾಮಿ (75) ತಮ್ಮ ಪುತ್ರ ಹರಿಕರನ್ (48) ಸ್ಮರಣಾರ್ಥ ಪ್ರತಿಮೆ ನಿರ್ಮಿಸಿದ್ದಾರೆ.
ಕಳೆದ ವರ್ಷ ಮೇ 10ರಂದು ಮಗ ಹರಿಕರನ್ ಹೃದಯಾಘಾತದಿಂದ ನಿಧನರಾಗಿದ್ದರು. ಮಗನನ್ನು ಅತಿಯಾಗಿ ಪ್ರೀತಿಸುತ್ತಿದ್ದ ದಂಪತಿ ಆತನ ಪ್ರತಿಮೆ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದಾರೆ. ನಂತರ ಅವರು ಮಹಬಲಿಪುರಂನಲ್ಲಿರುವ ಶಿಲ್ಪಿಯನ್ನು ಸಂಪರ್ಕಿಸಿ 2.5 ಲಕ್ಷ ರೂಪಾಯಿ ಖರ್ಚು ಮಾಡಿ 5.3 ಅಡಿ ಪ್ರತಿಮೆ ಮಾಡಿದ್ದಾರೆ. ಹರಿಕರನ್ಗೆ ಪ್ರಿಯವಾದ ಬಣ್ಣದ ಪ್ಯಾಂಟ್ ಮತ್ತು ಶರ್ಟ್‌ಗಳನ್ನು ಪ್ರತಿಮೆಗೆ ತೊಡಿಸಿ, ಮನೆಯ ಮುಂದೆ ಇರಿಸಿದ್ದಾರೆ.