ಪೈಂಗನಾಡು: ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ಇತ್ತ ತಮಿಳುನಾಡಿನ ತಿರುವನೂರು ಜಿಲ್ಲೆಯ ಪೈಂಗನಾಡು ಗ್ರಾಮದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತು.
ಅಮೆರಿಕ ಉಪಾಧ್ಯಕ್ಷೆಯಾಗಿ ಪದಗ್ರಹಣ.. ಕಮಲಾ ಹ್ಯಾರಿಸ್ ಪೂರ್ವಜರ ಗ್ರಾಮದಲ್ಲಿ ಸಂಭ್ರಮಾಚರಣೆ
ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪದಗ್ರಹಣ ಸಮಾರಂಭದ ವೇಳೆ ಅವರ ಪೂರ್ವಜರ ಗ್ರಾಮದಲ್ಲಿ ಸಂಭ್ರಮಾಚರಣೆ ಜೋರಾಗಿಯೇ ನಡೆದಿದೆ.
ಕಮಲಾ ಹ್ಯಾರಿಸ್ ಪೂರ್ವಜರ ಗ್ರಾಮದಲ್ಲಿ ಸಂಭ್ರಮಾಚರಣೆ
ಕಮಲಾ ಹ್ಯಾರಿಸ್ ಅವರ ಪೂರ್ವಜರು ಬದುಕಿ ಬಾಳಿದ ಪೈಂಗನಾಡು ಗ್ರಾಮದಲ್ಲಿ ಜನರು ಬೃಹತ್ ಟಿವಿ ಮೂಲಕ ಪದಗ್ರಹಣ ಸಮಾರಂಭವನ್ನು ವೀಕ್ಷಿಸಿದರು. ಕಮಲಾ ಹ್ಯಾರಿಸ್ ಭಾವಚಿತ್ರ ಹಿಡಿದು, ಪಟಾಕಿ ಸಿಡಿಸಿ ಸಂಭ್ರಮಿಸಿ ವಿಶೇಷ ಅಭಿಮಾನ ಮೆರೆದರು.
ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ತುಳಸೇಂದ್ರಪುರಂ ಗ್ರಾಮದವರಾಗಿದ್ದು, ಅವರ ತಂದೆ ಡೊನಾಲ್ಡ್ ಜೆ ಹ್ಯಾರಿಸ್ ಜಮೈಕಾದವರು. ಈ ದಂಪತಿಗೆ ಕ್ಯಾಲಿಪೋರ್ನಿಯಾದ ಓಕ್ಲಾಂಡ್ನಲ್ಲಿ 1964ರಲ್ಲಿ ಜನಿಸಿದ ಪುತ್ರಿಯೇ ಕಮಲಾ ಹ್ಯಾರಿಸ್, ಇದೀಗ ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.