ವಯನಾಡ್ ( ಕೇರಳ) :ಮಂಗಗಳ ಕಾಟಕ್ಕೆ ಪರಿಹಾರ ನೀಡುವವರಿಗೆ ಮಾತ್ರ ಮತ ನೀಡುವುದಾಗಿ ವಯನಾಡ್ನ ಕಲ್ಪೆಟ್ಟ ಗ್ರಾಮದ ಜನರು ತೀರ್ಮಾನಿಸಿದ್ದಾರೆ.
ಮಂಗಗಳ ಉಪಟಳ ತಪ್ಪಿಸುವವರಿಗೆ ಮಾತ್ರ ಮತ.. ಕೇರಳದ ಗ್ರಾಮಸ್ಥರಿಂದ ಹೀಗೊಂದು ನಿರ್ಧಾರ - ಮಂಗಗಳ ಕಾಟ ಪರಿಹರಿಸುವವರಿಗೆ ಮತ ನೀಡಲು ಕಲ್ಪೆಟ್ಟ ಗ್ರಾಮಸ್ಥರ ನಿರ್ಧಾರ
ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಂಗಗಳ ಕಾಟದಿಂದ ಯಾರು ತಮಗೆ ಮುಕ್ತಿ ನೀಡುವ ಭರವಸೆ ನೀಡುತ್ತಾರೋ ಅವರಿಗೆ ತಮ್ಮ ಮತ ಹಾಕುವುದಾಗಿ ಸ್ಥಳೀಯರು ತಿಳಿಸಿದ್ದಾರೆ..
ಕಲ್ಪೆಟ್ಟ ಗ್ರಾಮದಾದ್ಯಂತ ಎಲ್ಲೆಲ್ಲೂ ಮಂಗಗಳೇ
ಕಲ್ಪೆಟ್ಟ ಗ್ರಾಮ ಅರಣ್ಯದ ಅಂಚಿನಲ್ಲಿದ್ದು, ಮಂಗಗಳು ಮನೆಗಳಿಗೆ ದಾಳಿ ನಡೆಸಿ ಆಹಾರ ಕದಿಯುತ್ತವೆ, ಜನರ ಮೇಲೆಯೂ ದಾಳಿ ನಡೆಸುತ್ತವೆ. ಹೀಗಾಗಿ, ಇಲ್ಲಿನ ಜನ ಮಂಗಗಳ ಉಪಟಳದಿಂದ ರೋಸಿ ಹೋಗಿದ್ದಾರೆ.
ಆದ್ದರಿಂದ, ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಂಗಗಳ ಕಾಟದಿಂದ ಯಾರು ತಮಗೆ ಮುಕ್ತಿ ನೀಡುವ ಭರವಸೆ ನೀಡುತ್ತಾರೋ ಅವರಿಗೆ ತಮ್ಮ ಮತ ಹಾಕುವುದಾಗಿ ಸ್ಥಳೀಯರು ತಿಳಿಸಿದ್ದಾರೆ.