ಕರ್ನಾಟಕ

karnataka

ETV Bharat / bharat

ಮಣ್ಣಲ್ಲಿ ಮಣ್ಣಾದ ಕಲ್ಲಕುರಿಚಿ ಪಿಯುಸಿ ವಿದ್ಯಾರ್ಥಿನಿ.. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿ

ಜುಲೈ 13ರಂದು ವಸತಿ ನಿಲಯದ ಕಟ್ಟಡದ ಮೇಲಿಂದ ಹಾರಿ ಮೃತಪಟ್ಟ 12ನೇ ತರಗತಿ ವಿದ್ಯಾರ್ಥಿನಿಯ ಅಂತ್ಯಕ್ರಿಯೆ ಇಂದು ನಡೆಯಿತು.

Kallakurichi school girl
Kallakurichi school girl

By

Published : Jul 23, 2022, 3:40 PM IST

Updated : Jul 23, 2022, 4:44 PM IST

ಕಲ್ಲಕುರಿಚಿ(ತಮಿಳುನಾಡು):ತಮಿಳುನಾಡಿನ ಕಲ್ಲಕುರಿಚಿ ವಸತಿ ಶಾಲೆಯಲ್ಲಿ ಜುಲೈ 13ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ವಿದ್ಯಾರ್ಥಿನಿಯ ಅಂತ್ಯಕ್ರಿಯೆ ಇಂದು ನಡೆಯಿತು. ಈ ವೇಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು. ಅಂತಿಮ ವಿದಾಯದ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಕಣ್ಣೀರು ಸುರಿಸಿದ ಕುಟುಂಬಸ್ಥರು:ಮಗಳ ಅಂತಿಮ ವಿಧಿ - ವಿಧಾನದಲ್ಲಿ ಭಾಗಿಯಾದ ಕುಟುಂಬಸ್ಥರು ಕಣ್ಣೀರು ಸುರಿಸಿದರು. ಜೊತೆಗೆ ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಈ ವೇಳೆ, ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತ್ಯಕ್ರಿಯೆಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

ಮಣ್ಣಲ್ಲಿ ಮಣ್ಣಾದ ಕಲ್ಲಕುರಿಚಿ ಪಿಯುಸಿ ವಿದ್ಯಾರ್ಥಿನಿ.. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿ

ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ತಮಿಳುನಾಡಿನಲ್ಲಿ ಭಾರಿ ಹಿಂಸಾಚಾರ, ವಿಧ್ವಂಸಕ ಕೃತ್ಯಕ್ಕೆ ಕಾರಣವಾಗಿತ್ತು. ಜುಲೈ 13ರಂದು ವಸತಿ ನಿಲಯದ ಕಟ್ಟಡದ ಮೇಲಿಂದ ಹಾರಿ ಮೃತಪಟ್ಟ 12ನೇ ತರಗತಿ ವಿದ್ಯಾರ್ಥಿನಿಯ ಮೃತದೇಹವನ್ನು ಪೋಷಕರಿಗೆ ನಿನ್ನೆ ಹಸ್ತಾಂತರಿಸಲಾಗಿತ್ತು.

ಇದರ ಬೆನ್ನಲ್ಲೇ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ತರಲಾಗಿತ್ತು.ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆದಿತ್ತು. ಇದು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಶಾಲೆಯ ಇಬ್ಬರು ಶಿಕ್ಷಕರ ಬಂಧನ ಮಾಡಲಾಗಿತ್ತು. ಜೊತೆಗೆ ಹಿಂಸಾಚಾರಕ್ಕೆ ಕಾರಣವಾಗಿದ್ದ ಸುಮಾರು 300ಕ್ಕೂ ಅಧಿಕ ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.

ಇದನ್ನೂ ಓದಿರಿ:Kallakurichi Violence: ಪೊಲೀಸ್​ ಬಿಗಿ ಭದ್ರತೆಯಲ್ಲಿ ವಿದ್ಯಾರ್ಥಿನಿ ಮೃತದೇಹ ಪಾಲಕರಿಗೆ ಹಸ್ತಾಂತರ

ಮಗಳ ಸಾವಿಗೆ ಅನುಮಾನ ವ್ಯಕ್ತಪಡಿಸಿದ್ದ ಪೋಷಕರು ಆಕೆಯ ಮೃತದೇಹ ಪಡೆದುಕೊಳ್ಳಲು ಹಿಂದೇಟು ಹಾಕಿದ್ದರು. ಹೀಗಾಗಿ, ಮೃತದೇಹವನ್ನ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಮತ್ತು ನಾವು ಆಯ್ಕೆ ಮಾಡುವ ವೈದ್ಯರನ್ನ ಇದಕ್ಕೆ ನಿಯೋಜಿಸಬೇಕು ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಈ ಅರ್ಜಿ ಸುಪ್ರೀಂಕೋರ್ಟ್​ನಿಂದ ವಜಾಗೊಂಡಿತ್ತು.

Last Updated : Jul 23, 2022, 4:44 PM IST

ABOUT THE AUTHOR

...view details