ಛತ್ತರ್‌ಪುರ (ಮಧ್ಯಪ್ರದೇಶ):ರಾಷ್ಟ್ರಪಿತ ಮಹಾತ್ಮಗಾಂಧಿ ವಿರುದ್ಧ ಹೇಳಿಕೆ ನೀಡಿ ಜೈಲುಪಾಲಾಗಿರುವ ಧಾರ್ಮಿಕ ಗುರು ಕಾಳಿಚರಣ್ ಅವರನ್ನು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ 'ರಾಕ್ಷಸ' ಎಂದು ಟೀಕಿಸಿದ್ದಾರೆ.
ಕಾಲಿಚರಣ್ ಬಂಧನದ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡುವ ವೇಳೆ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಕಾಳಿಚರಣ್ ಹಿಂದೂ ಸಂತನಲ್ಲ, ಅವನೊಬ್ಬ 'ಸಂತನ ರೂಪದಲ್ಲಿರುವ ರಾಕ್ಷಸ' ಎಂದು ಕಟುವಾಗಿ ಟೀಕಿಸಿದ್ದಾರೆ.
ಇದಲ್ಲದೇ, ಸಂತರು ಜನರಿಗೆ ಉತ್ತಮ ಬೋಧನೆ, ಧರ್ಮದ ಸಾರದ ಬಗ್ಗೆ ತಿಳಿಸುತ್ತಾರೆ. ಆದರೆ, ಸಂತನ ರೂಪದಲ್ಲಿರುವ ಕಾಳಿಚರಣ್ ಅಹಿಂಸೆ, ಶಾಂತಿ, ಪ್ರೀತಿ ಮತ್ತು ಸೌಹಾರ್ಧತೆಯನ್ನು ಸಾರಿದ ರಾಷ್ಟ್ರಪಿತ ಗಾಂಧೀಜಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೇ ನಾಥೂರಾಮ್ ಗೋಡ್ಸೆಯನ್ನು ಹೊಗಳಿಸಿದ್ದರು. ಹಾಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಮಧ್ಯಪ್ರದೇಶದ ಬಿಜೆಪಿಗರು ಕಾಳಿಚರಣ್ ಬಂಧನದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಗಾಂಧಿಯನ್ನು ಟೀಕಿಸಿದಾಗ ಖಂಡಿಸದ ಇವರು, ಕಾಳಿಚರಣ್ ಬಂಧನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರಾ ಅಥವಾ ಬೆಂಬಲಿಸುತ್ತಿದ್ದಾರಾ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಗಾಂಧೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಮಧ್ಯಪ್ರದೇಶದ ಖುಜುರಾಹೋ ಹೋಟೆಲ್ನಲ್ಲಿ ತಲೆಮರೆಸಿಕೊಂಡಿದ್ದ ಕಾಳಿಚರಣ್ ಅವರನ್ನು ಛತ್ತೀಸ್ಗಢ ಪೊಲೀಸರು ದಾಳಿ ಮಾಡಿ ಬಂಧಿಸಿದ್ದರು.